Select Your Language

Notifications

webdunia
webdunia
webdunia
webdunia

ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ: ಓರ್ವ ಸಾವು, 45 ಅಂಗಡಿ ಭಸ್ಮ

ಪಟಾಕಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ: ಓರ್ವ ಸಾವು, 45 ಅಂಗಡಿ ಭಸ್ಮ
ಒಡಿಶಾ , ಬುಧವಾರ, 18 ಅಕ್ಟೋಬರ್ 2017 (14:59 IST)
ಒಡಿಶಾ: ಒಡಿಶಾದ ಮಾರ್ಕೆಟ್‌ವೊಂದರಲ್ಲಿ ಪಟಾಕಿ ಸ್ಫೋಟಗೊಂಡ ಪರಿಣಾಮ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ರೂರ್ಕೆಲಾದ ಮಾರ್ಕೆಟ್‌ ನಲ್ಲಿರುವ ಪಟಾಕಿ ಅಂಗಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆದ ಹಿನ್ನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಪಟಾಕಿಗೆ ಬೆಂಕಿ ತಗುಲಿದ್ದರಿಂದ ಪಟಾಕಿಗಳು ಸ್ಫೋಟಗೊಂಡಿವೆ. ಪರಿಣಾಮ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ. 45ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ತಗುಲಿದ್ದು, 1ಕೋಟಿಗೂ ಅಧಿಕ ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿದೆ.

ಇಂದು 2.35ರ ವೇಳೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ 9ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸಿವೆ. ಘಟನೆಯಲ್ಲಿ 18 ದ್ವಿಚಕ್ರ ವಾಹನ ಸೇರಿದಂತೆ 19 ವಾಹನಗಳು ಬೆಂಕಿಗಾಹುತಿಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಿವಾಹಿತೆಗೆ ಜನಿಸಿದ ಮಗು ಅಚ್ಚರಿ ರೀತಿಯಲ್ಲಿ ನಾಪತ್ತೆ: ವೈದ್ಯರಿಂದ ದೂರು