Select Your Language

Notifications

webdunia
webdunia
webdunia
webdunia

‘ರಾಹುಲ್ ಗಾಂಧಿ ಕ್ರಿಶ್ಚಿಯನ್, ಮನೆಯೊಳಗೇ ಒಂದು ಚರ್ಚ್ ಕಟ್ಟಿಕೊಂಡಿದ್ದಾರೆ’

‘ರಾಹುಲ್ ಗಾಂಧಿ ಕ್ರಿಶ್ಚಿಯನ್, ಮನೆಯೊಳಗೇ ಒಂದು ಚರ್ಚ್ ಕಟ್ಟಿಕೊಂಡಿದ್ದಾರೆ’
ನವದೆಹಲಿ , ಶುಕ್ರವಾರ, 29 ಸೆಪ್ಟಂಬರ್ 2017 (11:54 IST)
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಕ್ರಿಶ್ಚಿಯನ್. ಅವರು ಮನೆಯೊಳಗೇ ಒಂದು ಚರ್ಚ್ ಕಟ್ಟಿಕೊಂಡಿದ್ದಾರೆ. ಹೀಗಂತ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೊಂಡಿದ್ದಾರೆ.


ಇತ್ತೀಚೆಗೆ ಕೆಲವು ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ ಮೊದಲು ತಾವು ಒಬ್ಬ ಹಿಂದೂ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಸಂಸದ ಸ್ವಾಮಿ ಸವಾಲು ಹಾಕಿದ್ದಾರೆ.

‘ನನ್ನ ಅನುಮಾನಗಳ ಪ್ರಕಾರ ಅವರೊಬ್ಬ ಕ್ರಿಶ್ಚಿಯನ್. 10 ಜನಪತ್ ನ ನಿವಾಸದೊಳಗೆ ಒಂದು ಚರ್ಚ್ ನಿರ್ಮಿಸಿಕೊಂಡಿದ್ದಾರೆ’ ಎಂದು ಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ. ಗುಜರಾತ್ ಗೆ ಮೂರು ದಿನಗಳ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ ಹಲವು ದೇವಾಲಯಗಳಿಗೆ ಭೇಟಿ ಕೊಟ್ಟ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಈ ಹೇಳಿಕೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ರೈಲ್ವೇ ನಿಲ್ಧಾಣದಲ್ಲಿ ಕಾಲ್ತುಳಿದಲ್ಲಿ 3 ಸಾವು ಹಲವರಿಗೆ ಗಾಯ