ಬೆಂಗಳೂರು: ವೈದ್ಯ ವಿಜ್ಞಾನ ಎಷ್ಟೇ ಮುಂದುವರಿದರೂ ಇಂದಿಗೂ ವೈದ್ಯರಿಗೇ ಸವಾಲಾಗಿ ನಿಂತಿರುವ ಮಹಾಮಾರಿ ರೋಗ ಕ್ಯಾನ್ಸರ್. ಇಂದು ವಿಶ್ವ ಕ್ಯಾನ್ಸರ್ ದಿನವಾಗಿದ್ದು ಈ ಮಹಾಮಾರಿ ಬಾರದಂತೆ ನಾವು ನಮ್ಮ ಕೈಲಾದ ಪ್ರಯತ್ನ ಮಾಡಬಹುದು.
ಕ್ಯಾನ್ಸರ್ ರೋಗ ಬರಲು ಮುಖ್ಯ ಕಾರಣ ದೇಹದಲ್ಲಿ ಸಿ ವಿಟಮಿನ್ ಅಂಶದ ಕೊರತೆ ಎನ್ನಲಾಗುತ್ತದೆ. ಹೀಗಾಗಿ ಪ್ರತಿನಿತ್ಯ ಬೆಳಿಗ್ಗೆ ನಿಂಬೆ ರಸ ಸೇರಿಸಿದ ಬಿಸಿ ನೀರಿನ ಸೇವನೆ ಮಾಡುವುದು, ಸಿ ವಿಟಮಿನ್ ಅಂಶವಿರುವ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸುವುದು ಉತ್ತಮ.
ಅದೇ ರೀತಿ ದೇಹದಲ್ಲಿ ಯಾವುದೇ ಸೂಕ್ಷ್ಮ ಬದಲಾವಣೆಗಳಾದರೆ, ಗಂಟಿನಂತಹ ರಚನೆ ಕಂಡುಬಂದರೆ, ಬಿಡದೇ ಕಾಡುವ ಹೊಟ್ಡೆನೋವು ಇತ್ಯಾದಿ ಸಮಸ್ಯೆಯಿದ್ದರೆ ತಕ್ಷಣವೇ ತಪಾಸಣೆ ನಡೆಸುವುದು ಉತ್ತಮ. ಈ ಮಾರಕ ರೋಗವನ್ನು ಆರಂಭದಲ್ಲಿಯೇ ಪತ್ತೆ ಮಾಡುವುದರಿಂದ ನಿವಾರಣೆ ಮಾಡಬಹುದು. ಹೀಗಾಗಿ ನಾವು ಜಾಗೃತರಾಗೋಣ, ಇತರರಿಗೂ ಜಾಗೃತಿ ಮೂಡಿಸೋಣ!