Select Your Language

Notifications

webdunia
webdunia
webdunia
Monday, 7 April 2025
webdunia

ಮೋದಿ ದವಡೆಗೆ ಹೊಡೆಯಿರಿ ಎಂದ ಜೆಡಿಎಸ್ ಶಾಸಕನ ವಿರುದ್ಧ ಕೇಸ್ ದಾಖಲು

ಪ್ರಧಾನಿ ಮೋದಿ
ಅರಸೀಕೆರೆ , ಭಾನುವಾರ, 31 ಮಾರ್ಚ್ 2019 (10:49 IST)
ಅರಸೀಕೆರೆ : ಪ್ರಧಾನಿ ಮೋದಿಯ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅರಸೀಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಶಿವಲಿಂಗೇಗೌಡ, ಮೋದಿಯವರನ್ನು ಟೀಕಿಸಿ ಭಾಷಣ ಮಾಡುವಾಗ, ಮೋದಿ ದವಡೆಗೆ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಸುದ್ದಿಯಾಗಿತ್ತು.


ಈ ರೀತಿ ಹೇಳಿಕೆ ನೀಡಿರುವುದಕ್ಕೆ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದೀಗ ಶಾಸಕ ಶಿವಲಿಂಗೇಗೌಡ ತಾವು ಹಾಗೆ ಹೇಳಿಲ್ಲ. ಬಳಸಿದ ಪದ ತಪ್ಪಾಗಿರಬಹುದು ಎಂದು ಶಿವಲಿಂಗೇಗೌಡ ಸಮಜಾಯಿಷಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಮಾಜಿ ಸಂಸದೆ ರಮ್ಯಾಗಿಲ್ಲ ಸ್ಥಾನ