Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿರುವ ಕಪ್ಪು ಕಡಲ ತೀರ ನಿಮಗೆ ಗೊತ್ತಾ?

ಕರ್ನಾಟಕದಲ್ಲಿರುವ ಕಪ್ಪು ಕಡಲ ತೀರ ನಿಮಗೆ ಗೊತ್ತಾ?

ಗುರುಮೂರ್ತಿ

ಬೆಂಗಳೂರು , ಗುರುವಾರ, 14 ಡಿಸೆಂಬರ್ 2017 (20:03 IST)
ಸಮುದ್ರ ಕಿನಾರೆ ಎಂತವರನ್ನು ಪ್ರಶಾಂತವಾಗಿಸುವ ಮಂತ್ರ ಮುಗ್ಧವಾಗಿಸುವ ಪ್ರದೇಶ. ಮಸ್ಸಂಜೆಯ ವೇಳೆಯಲ್ಲಿ ಕಡಲ ತೀರದಲ್ಲಿ ಉಸುಕಿನ ಮೇಲೆ ನಡೆಯುವುದೇ ಒಂದು ಚೆಂದ. ಮುಳುಗುತ್ತಿರುವ ಸೂರ್ಯ ತನ್ನ ಕಾಯಕ ಮುಗಿಸಿ ಮರಳುವಾಗ ಕಿನಾರೆ ದಂಡೆಯ ಮೇಲೆ ಕುಳಿತಿರುವ ನಮಗೆ ಆ ದೃಶ್ಯ ಮನಸೂರೆಗೊಳ್ಳುವುದಂತು ಸುಳ್ಳಲ್ಲ. ಅಂತಹ ಒಂದು ಕಡಲು ವಿಶೇಷ ರೀತಿಯಲ್ಲಿದ್ದರೆ ಹೇಗಿರಬಹುದು ಎನ್ನುವ ಕುತೂಹಲ ನಿಮಗಿದೆಯೇ ಈ ವರದಿಯನ್ನು ಓದಿ. 
ಹೌದು ನಾವು ಹೇಳ ಹೊರಟಿರುವುದು ಸಾಮಾನ್ಯವಾಗಿ ಕಾಣುವ ಸಮುದ್ರ ತೀರಗಳ ಬಗ್ಗೆ ಅಲ್ಲಾ ಇದು ತುಂಬಾ ವಿಶೇಷವಾದ ಕಡಲ ತೀರ ಸಾಮಾನ್ಯವಾಗಿ ನಾವು ನೋಡಿದ ಅಥವಾ ನೋಡಿರುವ ಸಮುದ್ರ ತೀರಗಳು ಎಲ್ಲಾ ಸಮುದ್ರ ದಂಡೆಗಳಂತೆ ಸಾಮಾನ್ಯವಾಗಿಯೇ ಇರುತ್ತದೆ ಆದರೆ ನಾವು ಹೇಳ ಹೊರಟಿರುವುದು ಮಾತ್ರ ಕಪ್ಪು ಮರಳಿನ ಸಮುದ್ರ ದಂಡೆಯ ಕುರಿತು ಅದು ನಮ್ಮ ಕರ್ನಾಟಕದಲ್ಲಿರುವುದು ವಿಶೇಷ.
 
ಕರ್ನಾಟಕದಲ್ಲಿರುವ ಕಾರವಾರ ಜಿಲ್ಲೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡಿದೆ ಅಷ್ಟೇ ಅಲ್ಲದೇ ಪಶ್ಚಿಮ ಕಡಲಿನ ಸಾಲನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿದ್ದು ಪ್ರವಾಸಿ ತಾಣವಾಗಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಆದರೆ ಇಲ್ಲಿರುವ ಕಡಲ ತೀರವು ಕೇವಲ ಒಂದೇ ರೀತಿಯಾಗಿಲ್ಲ ಇವು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಪ್ರತಿಯೊಂದು ಕಡಲ ತೀರವು ತನ್ನದೇ ಆದ ಹಿರಿಮೆಯನ್ನು ಹೊಂದಿದೆ ಅಂತಹ ಕಡಲು ತೀರಗಳಲ್ಲಿ ತಿಲ್ಮಾತಿ ಕಡಲು ತೀರವು ಒಂದು.
 
ತಿಲ್ಮಾತಿ ಕಡಲು ತೀರ ಇತರ ಕಡಲು ತೀರಗಳಿಗಿಂತ ತುಂಬಾ ಭಿನ್ನ ಮತ್ತು ಮನಮೋಹಕ. ಇಲ್ಲಿನ ಮರಳು ಕಪ್ಪು ಬಣ್ಣದಲ್ಲಿದ್ದು ಕರ್ನಾಟಕದಲ್ಲಿ ಕಂಡುಬರುವ ಕಡಲ ತೀರಗಳಲ್ಲಿ ಕಪ್ಪು ಮರಳನ್ನು ಹೊಂದಿರುವ ಸಮುದ್ರ ತೀರವು ತುಂಬಾನೇ ವಿರಳವಾಗಿದೆ. ಗೋವಾದಿಂದ ಮಂಗಳೂರುವರೆಗಿನ ಕಡಲು ತೀರಗಳಿಗೆ ಹೋಲಿಸಿದರೆ ಇದು ಒಂದು ರೀತಿಯ ವಿಶೇಷ. ಇದರ ಪಕ್ಕದಲ್ಲೇ ಗೋವಾ ರಾಜ್ಯದ ಪೋಲೆಂ ಕಡಲು ತೀರ ಮತ್ತು ಮಾಜಾಳಿ ಕಡಲು ತೀರ ಕೂಡಾ ಇದ್ದು ನಿಮ್ಮ ಪ್ರವಾಸಕ್ಕೆ ಇಂಬು ಕೊಡುವುದರಲ್ಲಿ ಎರಡು ಮಾತಿಲ್ಲ. 
 
ತಿಲ್ಮಾತಿ ಕಡಲು ತೀರವು ಸುಮಾರು 200 ಮೀಟರವರೆಗೆ ವಿಸ್ತಾರವನ್ನು ಹೊಂದಿದ್ದು ಸೂತ್ತಲು ಕಪ್ಪು ಮರಳಿನಿಂದ ಕೂಡಿದೆ ಅಷ್ಟೇ ಅಲ್ಲ ಇದರ ಸೂತ್ತಲೂ ಕಪ್ಪು ಕಲ್ಲುಗಳು ಹೊಂದಿರುವುದರಿಂದ ಇದರ ಮೆರಗಿಗೆ ಇನ್ನಷು ಸೊಬಗು ನೀಡುವಲ್ಲಿ ಅದೂ ಕೂಡಾ ಸಹಾಯಕವಾಗಿದೆ. ಇದು ಪ್ರೇಮಿಗಳಿಗೆ ವಿಹಾರ ತಾಣವಾಗಿವೆ ಮತ್ತು ಬೇಸರ ಕಳೆಯಲು ಏಕಾಂತ ಬಯಸಿ ಬರುವವರಿಗೆ ಇದು ಉತ್ತಮ ಸ್ಥಳವಾಗಿದೆ. ಈ ಪ್ರದೇಶವು ತುಂಬಾ ಸ್ವಚ್ಛವಾಗಿದ್ದು ಸಾಹಸ ಪ್ರವರ್ತಿಯನ್ನು ಹೊಂದಿರುವವರಿಗೆ ಇದು ಉತ್ತಮ ತಾಣವೆಂದೇ ಹೇಳಬಹುದು. ಅಲ್ಲದೇ ಹತ್ತಿರದಲ್ಲಿರುವ ಮಾಜಾಳಿಯ ಬೀಚ್‌ನಲ್ಲಿ ಬೋಟಿಂಗ್‌‌‌ಗಳು, ಸ್ಪೀಡ್ ಬೋಟ್ ಟ್ರಿಪ್, ರೋವಿಂಗ್, ಪೆಡಲಿಂಗ್‌ನಂತಹ ಮನರಂಜನೆಗಳನ್ನು ಪ್ರವಾಸಿಗರು ಇಲ್ಲಿ ಆನಂದಿಸಬಹುದಾಗಿದೆ
 
ಸಮುದ್ರ ದಂಡೆಗೆ ಹೋಗುವ ದಾರಿ
 
ಈ ದಂಡೆಗೆ ಹೋಗಲು ಬಸ್ಸಿನ ಸೌಕರ್ಯವಿದ್ದು ಮಾಜಾಳಿ ಬಸ್ಸು ನಿಲ್ದಾಣದಿಂದ ಸುಮಾರು 1.5 ಕಿಮೀ ನಡೆಯಬೇಕಾಗುತ್ತದೆ. ಅಲ್ಲದೇ ಬೈಕು ಕಾರುಗಳಲ್ಲಿ ಪ್ರಯಾಣಿಸುವವರು ಮಾಜಾಳಿಯ ಸಮೀಪ ನಿಲುಗಡೆ ಮಾಡಿ ಸಾಗಬಹುದು. ಇದು ಕಾರವಾರ ಬಸ್ಸು ನಿಲ್ದಾಣದಿಂದ 14 ಕಿಮೀ ದೂರದಲ್ಲಿದ್ದು ಕ್ಯಾಬ್ ಮತ್ತು  ರಿಕ್ಷಾಗಳ ಸೌಕರ್ಯವು ನಿಮಗೆ ಲಭ್ಯವಿರುತ್ತದೆ.
 
ಉಟೋಪಚಾರ
ನೀವು ತಿಲ್ಮಾತಿ ಕಡಲು ತೀರಕ್ಕೆ ಹೋಗಲು ಬಯಸಿದರೆ ನಿಮಗೆ ಬೇಕಾಗಿರುವ ತಿನಿಸುಗಳು ನೀರಿನ ಬಾಟಲ್‌ಗಳನ್ನು ಒಯ್ಯುವುದು ಸೂಕ್ತ. ಏಕೆಂದರೆ ಕಡಲ ತೀರದಲ್ಲಿ ಯಾವುದೇ ರೀತಿಯ ಅಂಗಡಿಗಳು ನಿಮಗೆ ಕಾಣಸಿಗುವುದಿಲ್ಲ ನಿಮಗೇನಾದರೂ ಅಗತ್ಯವಿದ್ದಲ್ಲಿ ನೀವು ಪೂನಃ ಮಾಜಾಳಿಗೆ ಬರಬೇಕಾಗುತ್ತದೆ. 
 
ಸಮುದ್ರದ ಅಲೆಗಳ ಮಧ್ಯೆ ಆನಂದಿಸಿ, ಏಕಾಂತವಾಗಿ ಸಮಯವನ್ನು ಕೆಳೆಯಬೇಕು, ಇಲ್ಲವೇ ರಾತ್ರಿಯ ಸಮಯವನ್ನು ಸ್ನೇಹಿತರೊಂದಿಗೆ ಸೇರಿ ಕ್ಯಾಂಪ್ ಮಾಡುವ ಯೋಜನೆ ಇದ್ದರೆ ಈ ಸ್ಥಳ ಉತ್ತಮವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಹ್ಯಾದ್ರಿ ತಪ್ಪಲಿನ ತಾಣ ನಮ್ಮ ಯಾಣ