Webdunia - Bharat's app for daily news and videos

Install App

ಸಿಗರೆಟ್ ಗಾಗಿ ಜಗಳ ಶುರು ಮಾಡಿದ್ದವರು ಕಿಡ್ನಾಪ್ ಮಾಡಿ ರೌಡಿಶೀಟರ್ ಆದ್ರು..!

Webdunia
ಭಾನುವಾರ, 27 ಆಗಸ್ಟ್ 2023 (19:31 IST)
ಯುವಕನೋರ್ವನನ್ನ ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ್ದ ಆರು ಜನ ಆರೋಪಿಗಳನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.. ಮೋಹನ್, ನವೀನ್, ಪುನೀತ್, ಅಭಿ, ರೂಪೇಶ್, ಪ್ರಶಾಂತ್ ಬಂಧಿತ ಆರೋಪಿಗಳು.. ಕ್ಷುಲ್ಲಕ ಕಾರಣಕ್ಕೆ ತರುಣ್ ಎಂಬಾತ ಮೇಲೆ ಹಲ್ಲೆ ಮಾಡಿ ಆತನ ಗೆಳೆಯ ಮಹೇಶ್ ಎಂಬಾತನನ್ನ ಕಿಡ್ನಾಪ್ ಮಾಡಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ರು.. ಈ ಸಂಬಂಧ ಎಲ್ಲಾ ಆರೋಪಿಗಳನ್ನ ಬಂಧಿಸಿರೋ ಮಾರತ್ತಹಳ್ಳಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

ಈ ಕೇಸ್ ಹೇ ಪೊಲೀಸರಿಗೂ ಏನ್ ಇಷ್ಟಕ್ಕೆ ಹಿಂಗೆಲ್ಲಾ ಆಯ್ತಾ ಅನ್ನಿಸಿದ್ದೇ ಇಂಟ್ರಷ್ಟಿಂಗ್ ಸ್ಟೋರಿ.. ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ಈ ಸ್ಮಷಾಣದಲ್ಲಿ ಕಳೆದ 20ನೇ ತಾರೀಖು ರಾತ್ರಿ ಗೆಳೆಯನ ಬರ್ತ್ ಡೇ ಪಾರ್ಟಿ ಮಾಡ್ತಿದ್ದ ಆರೂ ಜನ ಆರೋಪಿಗಳು ಕುಣಿದು ಕುಪ್ಪಳಿಸಿದ್ರು.. ಎಣ್ಣೆ ಮತ್ತಿನಲ್ಲಿದ್ದ ಆರೋಪಿ ರೂಪೇಶ್ ಅಲ್ಲೇ ಇದ್ದ ಬೀಡಾ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದ.. ಸಿಗರೆಟ್ ವಿಚಾರಕ್ಕೆ ಬೀಡಾ ಅಂಗಡಿಯವ್ನತ್ರ ಜಗಳ ತೆಗೆದು ವಾದ ಮಾಡ್ತಿದ್ದ.. ಈ ವೇಳೆ ಅಕ್ಷರಶಃ ಟೈಮ್ ಕರಾಬ್ ಆಗಿದ್ದು ತಮ್ಮ ಪಾಡಿಗೆ ತಾವು ಊಟ ಮುಗಿಸಿಕೊಂಡು ಬಂದಿದ್ದ ತರುಣ್ ಮತ್ತೆ ಆತನ ಮಹೇಶನದ್ದು.. ಅದೇ ಟೈಮಲ್ಲಿ ಹೋಟೆಲ್ ವೊಂದರಲ್ಲಿ ಊಟ ಮುಗಿಸಿಕೊಂಡು ಬಂದಿದ್ದ ಮಹೇಶ್ ಮತ್ತೆ ತರುಣ್ ಬೀಡಾ ಅಂಗಡಿ ಬಳಿ ಗಾಡಿ ಸೈಡಾಕಿದ್ರು.. ರೂಪೇಶ್ ಮತ್ತೆ ಬೀಡಾ ಅಂಗಡಿಯವನ ಜಗಳದ ಮಧ್ಯೆ  ಬಾಳೆ ಹಣ್ಣು ತೆಗೆದುಕೊಂಡಿದ್ದ ತರುಣ್ ಹಣ ಕೊಡಲು ಮುಂದಾಗಿದ್ದ.. ಈ ವೇಳೆ ತಮ್ಮ ಜಗಳದ ಮಧ್ಯೆ ತರುಣ್ ಗೆ ಬಾಳೆ ಹಣ್ಣಿಗೆ ಹಣ ಕೊಡ್ಬೇಡ ಗುರು.. ಹಂಗೇ ಹೋಗು ಎಂದಿದ್ದಾನೆ.. ಆದ್ರೆ ತಗೊಂಡಿದ್ದಕ್ಕೆ ಯಾಕೆ ಸುಮ್ನೆ ಅಂತಾ ಅಂಗಡಿಯವ್ನಿಗೆ ತರುಣ್ ಹಣ ಕೊಟ್ಟಿದ್ದಾನೆ.. ಅಷ್ಟೇ ಅಂಗಡಿಯವನ ಹೆಗಲೇರಿದ್ದ ಶನಿ ತರುಣ್ ಗೆ ಶಿಫ್ಟ್ ಆಗಿದ್ದ ಅನ್ಸುತ್ತೆ.. ಅಷ್ಟಕ್ಕೇ ಕೋಪಗೊಂಡಿದ್ದ ರೂಪೇಶ ತರುಣ್ ಬೆನ್ನಿಗೆ ಕೈಲಿದ್ದ ಬೈಕ್ ಕೀಯಿಂದ ಇರಿದಿದ್ದಾನೆ.. ಕೂಡಲೇ ಆತನನ್ನ ತಳ್ಳಿದ್ದ ತರುಣ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.. ಈ ವೇಳೆ ಮತ್ತಷ್ಟು ಕೋಪಗೊಂಡಿದ್ದ ರೂಪೇಶ್ ತನನ್ನ ಗ್ಯಾಂಗ್ ನನ್ನ ಕರೆದು ಅಲ್ಲೇ ಇದ್ದ ತರುಣ್ ಗೆಳೆಯ ಮಹೇಶ್ ನನ್ನ ಲಾಕ್ ಮಾಡಿದ್ದಾರೆ.. ನಂತರ ಆತನನ್ನ ಬೈಕ್ ನಲ್ಲಿ ಕಿಡ್ನಾಪ್ ಮಾಡಿ ಕೆಲ ಏರಿಯಾಗಳನ್ನ ಸುತ್ತಿಸಿ ತರುಣ್ ನನ್ನ ಕರೆಸು ಅಂತಾ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಜಗಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ತರುಣ್ ಸೀದಾ ಹೋಗಿದ್ದು ಮಾರತ್ತಹಳ್ಳಿ ಪೊಲೀಸ್ ಠಾಣೆಗೆ.. ತನ್ನ ಮೊಬೈಲ್ ಅನ್ನ ಮಹೇಶ್ ಗೆ ಕೊಟ್ಟಿದ್ದವ ಸೀದಾ ಹೋಗಿ ಪೊಲೀಸರಿಗೆ ಘಟನೆ ಬಗ್ಗೆ ದೂರು ನೀಡಿದ್ದಾನೆ.. ಈ ವೇಳೆ ತರುಣ್ ಫೋನಿಗೆ ಪೊಲೀಸರು ವಿಡಿಯೋ ಕಾಲ್ ಮಾಡಿದ್ದಾರೆ.. ಅಷ್ಟೇ ವಿಡಿಯೋ ಕಾಲ್ ರಿಸೀವ್ ಮಾಡಿದ್ದ ಕೂಡಲೇ ಪೊಲೀಸರನ್ನ ನೋಡಿದ್ದ ಆರೋಪಿಗಳು ಮಹೇಶ್ ನನ್ನ ಬಿಟ್ಟು ಎಸ್ಕೇಪ್ ಆಗಿದ್ದಾರೆ.ಸದ್ಯ ಆರೋಪಿಗಳನ್ನ ಬಂಧಿಸಿರೋ ಮಾರತ್ತಹಳ್ಳಿ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.. ಸಣ್ಣ ವಿಚಾರಕ್ಕೆ ಇಷ್ಟು ದೊಡ್ಡ ಕೃತ್ಯ ಎಸಗಿರೋ ಆರೋಪಿಗಳ ಮೇಲೆ ರೌಡಿಶೀಟ್ ಓಪನ್ ಮಾಡೋಕೆ ಸಿದ್ಧತೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ಕೊಟ್ಟ ಚಿದಂಬರಂಗೆ ಬೆವರಿಳಿಸಿದ ಅಮಿತ್ ಶಾ: ವಿಡಿಯೋ

ವಿಜಯೇಂದ್ರನಿಂದ ನಾನು ಪಾಠ ಕಲಿಯಬೇಕಾ: ಸಿದ್ದರಾಮಯ್ಯ ರೋಷಾವೇಷ

ಅಮಾನತು ಮಾಡೋದು, ಮತ್ತೆ ರದ್ದು ಮಾಡೋದು ಎಲ್ಲಾ ನಾಟಕ: ಬಿವೈ ವಿಜಯೇಂದ್ರ

ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments