Select Your Language

Notifications

webdunia
webdunia
webdunia
webdunia

ಸಾಮರ್ಥ್ಯಕ್ಕಿಂತ ಹೆಚ್ಚು ಜನರು ತೆರಳಿದ್ದೇ ತೆಪ್ಪ ಮುಳುಗಲು ಕಾರಣ

ಸಾಮರ್ಥ್ಯಕ್ಕಿಂತ ಹೆಚ್ಚು ಜನರು ತೆರಳಿದ್ದೇ ತೆಪ್ಪ ಮುಳುಗಲು ಕಾರಣ
ಶಿವಮೊಗ್ಗ: , ಗುರುವಾರ, 8 ಸೆಪ್ಟಂಬರ್ 2016 (19:05 IST)
ಶಿವಮೊಗ್ಗದ ತೆಪ್ಪ ದುರಂತಕ್ಕೆ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ತೆಪ್ಪದಲ್ಲಿ ತೆರಳಿದ್ದೇ ಕಾರಣವೆಂದು ಹೇಳಲಾಗುತ್ತಿದೆ. ತೆಪ್ಪ ಮುಳುಗಿ ಮೃತಪಟ್ಟ 11 ಜನರ ಶವಗಳು ಸಿಕ್ಕಿದ್ದು, ಹಾಡೋನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗಣಪತಿ ವಿಸರ್ಜನೆಗೆ ತೆರಳಿದವರು ಈ ರೀತಿ ದುರಂತ ಅಂತ್ಯ ಕಾಣುತ್ತಾರೆಂದು ಯಾರೂ ಭಾವಿಸಿರಲಿಲ್ಲ. ಈ 11 ಜನರ ದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. 
 
ಗ್ರಾಮದ ಎಲ್ಲ ಗಣಪತಿ ವಿಗ್ರಹಗಳನ್ನು ಒಂದೇ ಬಾರಿಗೆ ವಿಸರ್ಜನೆ ಮಾಡುವ ಸಂಪ್ರದಾಯ ಬೆಳೆದುಬಂದಿದೆ. ಇದೇ ರೀತಿ ಮೂರ್ತಿಗಳ ಮೆರವಣಿಗೆ ಬುಧವಾರ ಬೆಳಿಗ್ಗೆ ಆರಂಭವಾಗಿ ಗ್ರಾಮದ ಹಿರಿಯರು ತೆಪ್ಪದಲ್ಲಿ ನದಿ ಮಧ್ಯದವರೆಗೆ ಹೋಗಿ ಗೌರಿಯ ವಿಗ್ರಹ ವಿಸರ್ಜಿಸಿ ಬಂದಿದ್ದಾರೆ.

ನಂತರ ಯುವಕರೇ ಹೆಚ್ಚಾಗಿ 25 ಜನರ ತಂಡ ಗಣಪತಿ ವಿಸರ್ಜಿಸಲು ಹೋಗಿದ್ದಾಗ ತೆಪ್ಪದ ಒಂದು ಭಾಗದಲ್ಲಿ ನೀರು ಏರಲು ಆರಂಭಿಸಿ ತೆಪ್ಪ ಮುಳುಗಿದ್ದರಿಂದ ಎಲ್ಲರೂ ನದಿಗೆ ಬಿದ್ದರು. ಈಜು ಬಂದವರು ಈಜಿ ದಡ ತಲುಪಿ ಪಾರಾದರೆ ಈಜು ಬಾರದವರು ಮುಳುಗಿ ಪ್ರಾಣ ಬಿಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್‌ಟಿಗೆ ರಾಷ್ಟ್ರಪತಿ ಅಂಕಿತ