Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆಗೆ ಇನ್ನೊಂದು ವಾರದಲ್ಲಿ ಹೊಸ ನಿಯಮಗಳು ಸಾಧ್ಯತೆ

ಶಕ್ತಿ ಯೋಜನೆಗೆ ಇನ್ನೊಂದು ವಾರದಲ್ಲಿ ಹೊಸ ನಿಯಮಗಳು ಸಾಧ್ಯತೆ
bangalore , ಸೋಮವಾರ, 19 ಜೂನ್ 2023 (13:21 IST)
ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಸವಾಲುಗಳ ಮೇಲೆ ಸವಾಲು ಎದುರಾಗುದೆ.ಸಾಮರ್ಥ್ಯ ಮೀರಿ  ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.ಈಗಾಗಲೇ ಪ್ರಯಾಣಿಕರು ಸೀಟ್ ಹಿಡಿಯುವ ನೆಪದಲ್ಲಿ ಕಿಟಕಿ, ಡೋರ್,ಪೀಸ್ ಪೀಸ್ ಮಾಡಿದ್ದಾರೆ.ಶಕ್ತಿ ಯೋಜನೆಯಿಂದ ಸಂಕಷ್ಟಕ್ಕೆ  ಚಾಲಕ ಮತ್ತು ನಿರ್ವಾಹಕರು ಸಿಲುಕಿದ್ದಾರೆ.ಕೆ ಎಸ್ ಆರ್ ಟಿಸಿ,ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಬಸ್ ಗಳಿಗೆ 55 ಮಂದಿಯನ್ನು ತುಂಬುವ ಸಾಮರ್ಥ್ಯ ಹೊಂದಿದೆ.ಬಿಎಂಟಿಸಿ ಬಸ್ ಗಳಲ್ಲಿ 40 ಮಂದಿ ಪ್ರಯಾಣಿಕರನ್ನು ತುಂಬುವ ಸಾಮರ್ಥ್ಯ ಹೊಂದಿರುತ್ತದೆ.ಉಚಿತ ಬಸ್ ಪ್ರಯಾಣದ ಬಳಿಕೆ 100 ಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಇದರಿಂದ ಬಸ್ ಡ್ರೈವರ್‌ ಗಳಿಕೆ ತಿರುವು ಪ್ರದೇಶಗಳಲ್ಲಿ ಕಷ್ಟ ವಾಗುತ್ತಿದೆ ಎಂದು ಚಾಲಕರು ವ್ಯಕ್ತಪಡಿಸಿದ್ದಾರೆ.ಅಷ್ಟೇ ಯಾಕೆ ತಿರುವು‌ ಘಟ್ಟ ಪ್ರದೇಶಗಳಲ್ಲಿ ಬಸ್ಸಿನ ಗುರುತ್ವಾಕರ್ಷಣೆಯ ಬಲ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.ಎಂತಾ ಅನುಭವ ಚಾಲಕರಿದ್ದರು ಕೂಡ ನಿಯಂತ್ರಿಸಲಾಗದೆ ಅನಾಹುತ ಸಂಭವಿಸಬಹುದು,ಈ ಹಿನ್ನೆಲೆಯಲ್ಲಿ ಇನ್ನೊಂದು ವಾರ ಪ್ರಯಾಣಿಕರ ಪ್ರಯಾಣಿಕರ ಪ್ರಯಾಣ ನೋಡಿ ಹೊಸ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ರಾಮಲಿಂಗ ರೆಡ್ಡಿ ಸಾರಿಗೆ ಸಚಿವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ : ವಿಜಯೇಂದ್ರ