Publish Date: Sun, 18 Jun 2023 (20:40 IST)
Updated Date: Sun, 18 Jun 2023 (20:37 IST)
ರಾತ್ರಿ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ಬಳಿ ರಸ್ತೆಯಲ್ಲಿ ನಿಂತು ಗ್ರಾಹಕರ ಗಮನ ಸೆಳೆಯುತ್ತಿದ್ದ ಮತ್ತು ಅನೈತಿಕ ಚಟುವಟಿಕೆ ನಡೆಯುತ್ತಿದೆ ಅನ್ನೋ ಶಂಕೆ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಒಂದು ವಿಶೇಷ ತಂಡವನ್ನು ರಚನೆ ಮಾಡಿ ಫೀಲ್ಡ್ ಗಿಳಿದು ರಸ್ತೆಯಲ್ಲಿ ನಿಂತಿದ್ದ ವಿದೇಶಿ ಮಹಿಳೆಯರನ್ನ ಯಾವುದೇ ಮುಲಾಜಿಲ್ಲದೇ ದಾಳಿ ಮಾಡಿದ್ದಾರೆ ಇನ್ನೂ ಇದೇ ವೇಳೆ ಒಟ್ಟು 25 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ದಾಳಿ ವೇಳೆ ಪೊಲೀಸ್ರು ರಸ್ತೆಗೆ ಬರ್ತಾಯಿದ್ದಂತೆ ಎದ್ನೋ ಬಿದ್ದಂತೆ ತಪ್ಪಿಸಿಕೊಳ್ಳಲು ಒಡೋಕೆ ಶುರು ಮಾಡ್ತಾರೆ, ಅವರನ್ನ ಚೇಸ್ ಮಾಡಿದ ಪೊಲೀಸರು ಎಲ್ಲರನ್ನು ಬಂದಿಸಿ ಠಾಣೆಗೆ ಕರೆತರ್ತಾರೆ, ಒಟ್ನಲ್ಲಿ ದಾಳಿ ಮಾಡಿದ ಆಪ್ರಿಕಾನ್ ವಿದೇಶಿ ಪ್ರಜೆಗಳನ್ನ ಜೀಪ್ ಹತ್ತಿಸುಲ್ಲಿ ಹರಸಾಹಸ ಪಡಬೇಕಾಯ್ತು