Publish Date: Mon, 01 May 2023 (20:50 IST)
Updated Date: Mon, 01 May 2023 (20:17 IST)
ಚುನಾವಣೆಗೂ ಮುನ್ನವೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟಿದ್ದಾರೆ.. ವಿಜಯಪುರದಲ್ಲಿ ಮಾತನಾಡಿದ ಅವರು, ನೋಡ್ರೀ ಪಕ್ಷ ಯಾರನ್ನೆ ಮುಖ್ಯಮಂತ್ರಿ ಮಾಡಲಿ, ಬಸವರಾಜ ಬೊಮ್ಮಾಯಿ ಅವರನ್ನಾದರೂ ಮುಖ್ಯಮಂತ್ರಿ ಮಾಡಲಿ. ನನ್ನನ್ನಾದ್ರೂ ಮುಖ್ಯಮಂತ್ರಿ ಮಾಡಲಿ ಎಂದು ಯತ್ನಾಳ್ ಹೇಳಿದ್ದಾರೆ.. ಎಲ್ಲರಿಗಿಂತ ನಾನು ಸ್ಟ್ರಾಂಗ್ ಇದ್ದೇನೆ. ಯಾರನ್ನ ಆದ್ರೂ ಮಾಡಲಿ ನನ್ನ ತಕರಾರಿಲ್ಲ. ಬೊಮ್ಮಾಯಿ ಅವರಿಗೆ ನಮ್ಮ ತರಹ ಸ್ಟ್ರಾಂಗ್ ಹಿಂದುತ್ವ ಇಲ್ಲ. ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.. ಇನ್ನು ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಮಹಾಬರಿ ಕಣದಿಂದ ಹಿಂದೆ ಸರದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ್ರು.. ವಿಜಯಪುರದಲ್ಲಿ ಯಾರಾದರೂ ಕಣದಿಂದ ಸರಿಯಲಿ ತಲೆಕೆಡಿಸಿಕೊಳ್ಳಬೇಡಿ.. ಇದರಿಂದ ಯಾವ ಬಿಗ್ ಶಾಕ್ ಇಲ್ಲ.. ನನ್ನ ಶಾಕ್ ಬೇರೆ ಇದೆ ಎಂದಿದ್ದಾರೆ