Publish Date: Mon, 01 May 2023 (19:40 IST)
Updated Date: Mon, 01 May 2023 (19:46 IST)
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹಾವೇರಿಯ ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.. ಮಧ್ಯಾಹ್ನ 3 ಗಂಟೆಗೆ ರಾಣೇಬೆನ್ನೂರಿನಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಲಿದ್ದಾರೆ.. ಹಾವೇರಿಯ KEB ಪೋಸ್ಟ್ ಸರ್ಕಲ್ನಿಂದ ಬಸ್ ಸ್ಟಾಂಡ್ ವೃತ್ತದವರೆಗೂ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮೊನ್ನೆಯಷ್ಟೆ ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಜ್ಜನರ ಪರ ಕ್ಯಾಂಪೇನ್ ಮಾಡಿದ್ದರು. ಇನ್ನು ಶಿವಮೊಗ್ಗದಲ್ಲಿಯೂ ಕೂಡ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ.. ಶಿವಪ್ಪನಾಯಕ ವೃತ್ತದಿಂದ ಲಕ್ಷ್ಮಿ ಟಾಕೀಸ್ವರೆಗೆ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ.. ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲು ವೃತ್ತ, ಲಕ್ಷ್ಮಿ ಟಾಕೀಸ್ವರೆಗೆ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ.. ಇಂದು ಸಂಜೆ 6 ಗಂಟೆಗೆ ರೋಡ್ ಶೋ ಆರಂಭವಾಗಲಿದೆ. ರೋಡ್ ಶೋ ಸಾಗುವ ಮಾರ್ಗದಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರೋಡ್ ಶೋನಲ್ಲಿ ಭಾಗವಹಿಸುವ ಕಾರ್ಯಕರ್ತರ ವಾಹನಗಳ ಪಾರ್ಕಿಂಗ್ಗೆ ಫ್ರೀಡಂ ಪಾರ್ಕ್, NES ಮೈದಾನ, ಸೈನ್ಸ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.