Webdunia - Bharat's app for daily news and videos

Install App

ಪ್ರೀತಿಸಿದ ಯುವತಿಯನ್ನ ಅತ್ಯಾಚಾರ ಮಾಡಿದ ಪ್ರೇಮಿ

Webdunia
ಗುರುವಾರ, 16 ಮಾರ್ಚ್ 2023 (16:22 IST)
ತಾನು ಪ್ರೀತಿಸಿದ ಯುವತಿಗೆ ಬೇರೆಯವನ ಜೊತೆ ಮದುವೆ ಫಿಕ್ಸ್‌ ಆಗಿದೆ ಎಂದು ಪ್ರಿಯತಮನೊಬ್ಬ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿ  ಕೊಲೆಗೈದಿರುವ ಘಟನೆ ವಿಲ್ಸನ್‌ ಗಾರ್ಡನ್‌ನಲ್ಲಿ ನಡೆದಿದೆ. ಮನೋಜ್ ಎಂಬಾತ ತನ್ನ ಪ್ರೇಯಸಿ ಶಾಲಿನಿಯನ್ನು ರೇಪ್ ಮಾಡಿ‌ ಕೊಲೆ‌ಗೈದು ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿಲ್ಸನ್‌ ಗಾರ್ಡನ್‌ನಲ್ಲಿ ವಾಸವಿದ್ದ ಶಾಲಿನಿ ಹಾಗೂ ಕೆಪಿ ಅಗ್ರಹಾರದ ಮನೋಜ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಶಾಲಿನಿ ಮನೆಯವರು ಇತ್ತಿಚೇಗೆ ಬೇರೆ ಯುವಕನೊಂದಿಗೆ ಮದುವೆ ಫಿಕ್ಸ್ ಮಾಡಿ ಇನ್ನೊಂದು ತಿಂಗಳಲ್ಲಿ ಮದುವೆಗೆ ದಿನಾಂಕ ಸಹ ನಿಗದಿ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಮನೋಜ್ ಬೇರೆಯವನ ಜೊತೆಮದುವೆಗೆ ಯಾಕೆ ಒಪ್ಪಿಕೊಂಡಿದ್ದೀಯಾ ಎಂದು ಶಾಲಿನಿ ಜೊತೆ ಗಲಾಟೆ ಶುರು ಮಾಡಿದ್ದ. ನಿನ್ನೆ ಸಂಜೆ ವೇಳೆ ಶಾಲಿನಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಮನೋಜ್‌ ಅವರ ಮನೆಗೆ ನುಗ್ಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಮದುವೆ ವಿಷಯಕ್ಕ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಗಲಾಟೆಯಾಗಿದೆ. ನಿಮ್ಮ ಮನೆಯವರು ತೋರಿಸಿದ ಹುಡುಗನನ್ನು ನೀನು ಒಪ್ಪಿಕೊಂಡಿದ್ದರಿಂದಲೇ ಮದುವೆ ಫಿಕ್ಸ್‌ ಆಗಿದೆ ಎಂದು ಮನೋಜ್‌ ಶಾಲಿನಿಯನ್ನು ಬೆಡ್‌ರೂಂಗೆ ಎಳೆದೊಯ್ದು ಅತ್ಯಾಚಾರವೆಸಗಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಇನ್ನು ಆಸ್ಪತ್ರೆಯಲ್ಲಿ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಆಕೆಯ ಮೇಲೆ ಬಲವಂತದ ಲೈಂಗಿಕ ಕ್ರಿಯೆ ನಡೆದಿದೆ. ನಂತರ ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.‌ ಇನ್ನು ಕೊಲೆ ಮಾಡಿದ ಆರೋಪಿ ಮನೋಜ್‌ ಯುವತಿಯ ಮನೆಯಿಂದ ಕೆ ಪಿ ಅಗ್ರಹಾರದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಮನೋಜ್‌ನನ್ನು ಕುಟುಂಬದವರು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆ‌ ಮುಂದುವೆರೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಡಿಕೆಶಿ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ರಾ ಸಿದ್ದರಾಮಯ್ಯ: ಆರ್ ಅಶೋಕ್‌

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ