Select Your Language

Notifications

webdunia
webdunia
webdunia
webdunia

ಗ್ಯಾರೆಂಟಿ ಕಾರ್ಡ್ ತೆಗೆದುಕೊಂಡು ಜನರು ಉಪ್ಪಿನಕಾಯಿ ಹಾಕಬೇಕಾ?- ಸಿಎಂ ಕಿಡಿ.

Should people be pickled by taking a guarantee card
bangalore , ಗುರುವಾರ, 16 ಮಾರ್ಚ್ 2023 (15:53 IST)
ಮಾರ್ಚ್​ 20ಕ್ಕೆ ಬೆಳಗಾವಿಗೆ ರಾಹುಲ್ ಗಾಂಧಿ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದಸಿಎಂ ಬಸವರಾಜ್ ಬೊಮ್ಮಯಿ ಅವರು, ರಾಹುಲ್ ಗಾಂಧಿ ಬರುತ್ತಾರೆ, ಹೋಗುತ್ತಾರೆ ಅಷ್ಟೇ ಅವರು ಬರುವುದರಿಂದ ಯಾವುದೇ ಬದಲಾವಣೆ ಅಂತೂ ಆಗಲ್ಲ, ಇನ್ನು ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದವರಿಗೆ ಅವರದೇ ಆದ ಗ್ಯಾರಂಟಿ ಇಲ್ಲ. ಅದಕ್ಕೆ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಗ್ಯಾರೆಂಟಿ ಕಾರ್ಡ್ ತೆಗೆದುಕೊಂಡು ಜನರು ಉಪ್ಪಿನಕಾಯಿ ಹಾಕಬೇಕಾ? ಅವರು ಅಧಿಕಾರಕ್ಕೆ ಬರುವುದಿಲ್ಲ. ಯಾವ ಯೋಜನೆಯೂ ಅನುಷ್ಠಾನ ಆಗುವುದಿಲ್ಲ. ಅನುಷ್ಠಾನ ಆಗುವಂತ ಕಾರ್ಯಕ್ರಮ ಅಲ್ಲ. ಕೇವಲ ಜನರನ್ನು ಮರಳು ಮಾಡುವಂತಹ ಕೆಲಸ. ಎಲ್ಲಾ ಸಮಯದಲ್ಲೂ ಎಲ್ಲಾ ಜನರನ್ನು ಮೋಸ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಎಂ ವಾಗ್ದಾಳಿ ಮಾಡಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಂದ ರೈತರಿಗಾಗಿ ಜನತಾ ರೈತ ಸಂಘ ಅಸ್ತಿತ್ವಕ್ಕೆ