Select Your Language

Notifications

webdunia
webdunia
webdunia
webdunia

ನಾನು ಯಾರ B ಟೀಮ್​​​ ಅಲ್ಲ..ಜನತೆಯ ಟೀಮ್

ನಾನು ಯಾರ B ಟೀಮ್​​​ ಅಲ್ಲ..ಜನತೆಯ ಟೀಮ್
ಬಾಗಲಕೋಟೆ , ಸೋಮವಾರ, 1 ಮೇ 2023 (17:30 IST)
ಜೆಡಿಎಸ್ ಕಾಂಗ್ರೆಸ್​​​ನ B ಟೀಮ್​​ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.. ಬಾಗಲಕೋಟೆಯ ಬಾದಾಮಿಯಲ್ಲಿ ಮಾತನಾಡಿದ HDK, ಪ್ರಧಾನಿ ನರೇಂದ್ರ ಮೋದಿ ಬಂದು ಬಿ ಟೀಂ ಅಂತಾರೆ.. ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಬಿ ಟೀಮ್​​​ ಅಂತಾರೆ. ನಾನು ಯಾವ ಟೀಮ್​​ ಅಂತಾ ಹೇಳಲಿ ಎಂದು ವಿಷಾದ ವ್ಯಕ್ತಪಡಿಸಿದ್ರು.. ನಾನು ಪ್ರತಿನಿತ್ಯ ಹೇಳ್ತೀನಿ ನಾನು ನಾಡಿನ ಜನತೆಯ ಟೀಮ್​​ ಅಂತಾ. ನಾನು ಕನ್ನಡಿಗರ ಟೀಮ್​​​​ ಅಂತಾ ನಾನು ಹೇಳ್ತಿನಿ ಎಂದರು.. ವರುಣಾದಲ್ಲಿ ಸಿದ್ದರಾಮಯ್ಯ ಸೋಲಿಸುವ ಪ್ಲ್ಯಾನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಚುನಾವಣೆ ನಡೆಸುತ್ತಿರೋದು ನಮ್ಮ ಅಭ್ಯರ್ಥಿ ಗೆಲುವಿಗಾಗಿ. ಇನ್ನೊಬ್ಬರನ್ನ ಸೋಲಿಸಬೇಕು ಅಂತಾ ಅಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸ್ತೀವಿ ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್​ಗೆ 113 ಸೀಟ್ ಬರುತ್ತಾ...?