Select Your Language

Notifications

webdunia
webdunia
webdunia
webdunia

ಕೇಂದ್ರ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್ ಮನೆ ಮೇಲೆ ಎಸಿಬಿ ದಾಳಿ

ಕೇಂದ್ರ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್ ಮನೆ ಮೇಲೆ ಎಸಿಬಿ ದಾಳಿ
bangalore , ಭಾನುವಾರ, 28 ನವೆಂಬರ್ 2021 (21:19 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಾಣ ಕೇಂದ್ರ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ಒಟ್ಟು 30.65 ಕೋಟಿ ರೂ. ಆಸ್ತಿ ಇದೆ. ತಮ್ಮ ದುಡಿಮೆಗಿಂತ ಶೇ.1408ರಷ್ಟು ಅಕ್ರಮ ಆದಾಯ ಗಳಿಸಿರುವ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಎಸಿಬಿ ಹೇಳಿದೆ.
ಇತ್ತೀಚೆಗೆ 15 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ನಡೆದ ದಾಳಿ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಎಲ್ಲರಿಗಿಂತ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾದ ಬೆಂಗಳೂರು ಗ್ರಾಮಾಂತರ‌ ಜಿಲ್ಲೆಯ‌ ನಿರ್ಮಿತಿ ಕೇಂದ್ರ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್​ ಅವರಿಗೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳ ಪರಿಶೀಲನೆ‌ ಮುಂದುವರೆಸಿದ್ದಾರೆ. ಕೆಲ ಸರ್ಕಾರಿ ಅಧಿಕಾರಿಗಳ ಬಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆ ಹಿನ್ನೆಲೆ ಎಸಿಬಿ ತಂಡ ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ ಕೆಲ ಅಧಿಕಾರಿಗಳ ಬ್ಯಾಂಕ್ ಖಾತೆಗಳನ್ನ ಜಾಲಾಡುತ್ತಿರುವ ಅಧಿಕಾರಿಗಳು, ಹಣದ ವ್ಯವಹಾರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೆಲವರು ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಗಳನ್ನ ಹೊಂದಿದ್ದು, ಕಲಬುರಗಿ ಹಾಗೂ ಗದಗ ಸೇರಿದಂತೆ ಕೆಲ ಜಿಲ್ಲೆಗಳಿಂದ ಎಸಿಬಿ ತಂಡ ಬಂದು, ಬ್ಯಾಂಕ್ ವಹಿವಾಟು ದಾಖಲೆಗಳನ್ನ ಪರಿಶೀಲಿಸಿ ಕ್ರೋಢೀಕರಿಸಿದ್ದಾರೆ. ಈ ಕುರಿತಾಗಿ ಎಸಿಬಿ ಮುಖ್ಯಸ್ಥರಿಗೆ ಅಧಿಕಾರಿಗಳ ಪ್ರತಿಯೊಂದು ತನಿಖಾ ರಿಪೋರ್ಟ್ ಸಲ್ಲಿಸಲಾಗಿದೆ.
ಹಿಂದೆ ನಿರ್ಮಿತಿ ಕೇಂದ್ರದ ಅಧಿಕಾರಿಯಾಗಿದ್ದ ವಾಸುದೇವ್, ಬೆಂಗಳೂರು ನಗರದಲ್ಲಿ ಮಾತ್ರವಲ್ಲದೆ ಬೆಂಗಳೂರಿನ ಹೊರವಲಯದಲ್ಲೂ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಬೆಂಗಳೂರಿನಲ್ಲೇ ಐದು ಕಟ್ಟಡಗಳಲ್ಲಿ, 28 ಬಾಡಿಗೆ ಮನೆಗಳನ್ನ ಹೊಂದಿದ್ದಾರೆ. ತನ್ನ ಸಂಪಾದನೆಯ ಆದಾಯಕ್ಕಿಂತ ಶೇ.1434 ಅಧಿಕ ಆಸ್ತಿ ಹೊಂದಿರುವ ವಾಸುದೇವ್ ಅವರ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ. ಕೆಂಗೇರಿ ಉಪನಗರ, ಮಲ್ಲೇಶ್ವರ, ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ, ಹೆಸರಘಟ್ಟ, ಕೆಂಗೇರಿಯಸೂಲಿಗೆರೆ, ಅರ್ಕಾವತಿ ಲೇಔಟ್, ಯಲಹಂಕ, ಜ್ಞಾನಭಾರತಿ ಬಿಡಿಎ ಸೈಟ್, ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್, ಹೊಸಕೆರೆಹಳ್ಳಿ ಸೇರಿದಂತೆ 16 ಕಡೆಗಳಲ್ಲಿ ನಿವೇಶನ ಹೊಂದಿರುವುದು ತನಿಖೆ ವೇಳೆ ಬಯಲಾಗಿದೆ.
ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ ರೂ.26,78 ಕೋಟಿ ಹಾಗೂ ಚರಾಸ್ಥಿ ಮೌಲ್ಯ ಅಂದಾಜು ರೂ.3,87 ಕೋಟಿಯಾಗಿದೆ‌. ಆರೋಪಿತನ ಒಟ್ಟು ಆಸ್ತಿಯು 30.60 ಕೋಟಿಯಾಗಿದ್ದು, ಈ ಪೈಕಿ 29.15 ಕೋಟಿ ಅಕ್ರಮ ಆಸ್ತಿಯ ಪ್ರಮಾಣವು ಶೇ.1408 ರಷ್ಟಾಗಿದೆ. ಆರೋಪಿ ಬಳಿ ಇನ್ನೂ ಹೆಚ್ಚಿನ ಅಕ್ರಮ ಆಸ್ತಿಯು ಕಂಡುಬರುವ ಸಾಧ್ಯತೆ ಇದ್ದು, ತಲಾಶ್​ ಮುಂದುವರೆದಿದೆ.
ಸದ್ಯ ಕೆಲ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಸೂಚಿಸಲಾಗಿದೆ. ಈ ನಡುವೆ ಮುಂದಿನ ಕಾನೂನು ಕ್ರಮಕ್ಕೆ ಎಸಿಬಿ ಅಧಿಕಾರಿಗಳ ಸಲಹೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ