ರಾಹುಲ್ ಗಾಂಧಿ ಹೇಳಿದ್ಮೇಲೆ ಎಲ್ರೂ ಬಾಯ್ಮುಚ್ಚಿಕೊಂಡಿರಬೇಕು: ಜಮೀರ್ ಅಹ್ಮದ್

Krishnaveni K
ಭಾನುವಾರ, 6 ಅಕ್ಟೋಬರ್ 2024 (17:16 IST)
ಬೆಂಗಳೂರು: ರಾಜ್ಯದಲ್ಲಿ ಈಗ ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ನಾಯಕರೊಳಗೇ ಕಚ್ಚಾಟವಾಗುತ್ತಿದೆ. ಇದೀಗ ಜಾತಿಗಣತಿ ವಿರೋಧಿಸುತ್ತಿರುವ ನಾಯಕರಿಗೆ ಸಚಿವ ಜಮೀರ್ ಅಹ್ಮದ್ ಟಾಂಗ್ ನೀಡಿದ್ದಾರೆ.

ಜಾತಿ ಗಣತಿ ಬಗ್ಗೆ ಡಿಕೆ ಸುರೇಶ್ ಪ್ರತಿಕ್ರಿಯಿಸಿ, ಸಿಎಂ ಎಚ್ಚರಿಕೆಯ ಹೆಜ್ಜೆಯಿಡಬೇಕು ಎಂದಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಬಿಕೆ ಹರಿಪ್ರಸಾದ್, ಡಿಕೆ ಸುರೇಶ್ ಯಾರಿಗೆ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೋ ಗೊತ್ತಿಲ್ಲ. ಆದರೆ ಜಾತಿಗಣತಿ ಎನ್ನುವುದು ನಿನ್ನೆ ಮೊನ್ನೆಯ ತೀರ್ಮಾನವಲ್ಲ. ಸರ್ಕಾರವೇ ಬಿದ್ದರೂ ಸರಿಯೇ ಜಾತಿಗಣತಿ ಮಾಡಿಯೇ ಸಿದ್ಧ ಎಂದಿದ್ದರು.

ಇದರ ನಡುವೆ ಸಚಿವ ಜಮೀರ್ ಅಹ್ಮದ್ ಖಡಕ್ ಉತ್ತರ ನೀಡಿದ್ದಾರೆ. ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಜಾತಿ ಗಣತಿ ಆಗಬೇಕು ಎಂದು ಅವರು ಹೇಳಿದ್ದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿದ್ಮೇಲೆ ಮುಗೀತು. ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು ಎಂದಿದ್ದಾರೆ.

ಜಾತಿಗಣತಿ ಆಗಬೇಕೆನ್ನುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇತ್ತು. ಇದನ್ನು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದರು. ಅದರಂತೆ ಕಾಂಗ್ರೆಸ್ ನಡೆದುಕೊಳ್ಳಲಿದೆ. ಇದನ್ನು ಯಾರು ವಿರೋಧಿಸುತ್ತಾರೋ ಬಿಡ್ತಾರೋ, ಒಟ್ಟಿನಲ್ಲಿ ಅವರು ಏನು ಹೇಳಿದ್ದಾರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾಗೆ ಯಾವ ಅಧಿಕಾರವಿತ್ತು ಎಂದು ಚುನಾವಣಾ ಆಯುಕ್ತರನ್ನು ನೇಮಕ ಮಾಡಿದ್ರು: ಬಿಜೆಪಿ ಪ್ರಶ್ನೆ

ಗ್ಯಾರಂಟಿ ಬಗ್ಗೆ ಶಾಸಕಾಂಗ ಸಭೆಯಲ್ಲಿ ಶಾಸಕರಿಂದಲೇ ಶಾಕಿಂಗ್ ಮಾತುಗಳು: ಮುಂದೇನು

ಸಿದ್ದರಾಮಯ್ಯನವರಿಗೆ ಪುತ್ರನಿಂದಲೇ ಎದುರಾಯ್ತಾ ಸಂಕಷ್ಟ

Karnataka Weather: ಇಂದು ಚಳಿ ಎಷ್ಟಿರಲಿದೆ ಗೊತ್ತಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಮುಂದಿನ ಸುದ್ದಿ
Show comments