Publish Date: Tue, 30 Jul 2019 (18:23 IST)
Updated Date: Tue, 30 Jul 2019 (18:24 IST)
ಟಿಪ್ಪು ಜಯಂತಿ ಆಚರಣೆಯನ್ನ ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿರೋದಕ್ಕೆ ಕೈ ಪಡೆ ಗರಂ ಆಗಿದೆ.
ಬಿಜೆಪಿ ನೇತೃತ್ವದ ಸರಕಾರದ ಕ್ರಮ ಖಂಡಿಸಿರೋ ಮಾಜಿ ಸಚಿವ ಜಮೀರ್ ಅಹ್ಮದ್, ಅದ್ಧೂರಿ ಹಾಗೂ ಸಡಗರದಿಂದಲೇ ಟಿಪ್ಪು ಜಯಂತಿಯನ್ನ ಈ ಬಾರಿಯೂ ಆಚರಣೆ ಮಾಡೇ ಮಾಡ್ತೇವೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.
ಜಾತ್ಯಾತೀತ ವ್ಯಕ್ತಿಗಳು ಟಿಪ್ಪು ಜಯಂತಿಯನ್ನು ಆಚರಿಸುತ್ತಾರೆ. ಮುಂದೆಯೂ ನಿರಂತರವಾಗಿ ಟಿಪ್ಪು ಜಯಂತಿ ಆಚರಣೆ ಮಾಡ್ತೇವೆ ಅಂತ ಹೇಳಿದ್ರು.
ಆತುರದಲ್ಲಿ ಮುಖ್ಯಮಂತ್ರಿಯು ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರೋದು ಸರಿ ಅಲ್ಲ ಅಂತ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.