ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲೂ ಝೆಡ್ ಪ್ಲಸ್ ಗರಿಷ್ಠ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಂಬಾನಿಯವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಇಂತಿಷ್ಟೇ ಪ್ರದೇಶಕ್ಕೆ ಭದ್ರತೆಯನ್ನು ಮಿತಿಗೊಳಿಸಬಾರದು ಎಂದು ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದಿನ್ ಅಮಾನುಲ್ಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ. ಭಾರತ ಸರ್ಕಾರದ ನಿಯಮಗಳ ಪ್ರಕಾರ ಇರುವ ಝೆಡ್ ಪ್ಲಸ್ ಭದ್ರತೆಯನ್ನು ವಿದೇಶಿಗಳಿಗೆ ತೆರಳಿದಾಗಲೂ ನೀಡಬೇಕು. ಮಹಾರಾಷ್ಟ್ರ ಸರ್ಕಾರ ಮತ್ತು ಗೃಹ ಸಚಿವಾಲಯವು ಇದನ್ನು ಖಚಿತಪಡಿಸಬೇಕು ಎಂದು ಪೀಠ ಹೇಳಿದೆ. ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲಿ ನೀಡಲಾಗುವ ಭದ್ರತೆಯ ವೆಚ್ಚವನ್ನೂ ಅವರೇ ಭರಿಸಬೇಕು ಎಂದು ಕೋರ್ಟ್ ಹೇಳಿದೆ.