ಗ್ರೀಸ್‌ನಲ್ಲಿ ರೈಲುಗಳ ಡಿಕ್ಕಿ: 26 ಸಾವು

Webdunia
ಗುರುವಾರ, 2 ಮಾರ್ಚ್ 2023 (14:03 IST)
ಗ್ರೀಸ್​​ನಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದು, 85ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಪೈಕಿ 25 ಜನ ಸ್ಥಿತಿ ಚಿಂತಾಜನಕವಾಗಿದೆ ಎಂದು ಗ್ರೀಸ್‌ ಪೊಲೀಸರು ಮಾಹಿತಿ ನೀಡಿದ್ದಾರೆ. ಅಥೆನ್ಸ್‌ನ ಉತ್ತರಕ್ಕೆ ಇರುವ ಟೆಂಪಿ ನಗರದ ಹೊರ ವಲಯದಲ್ಲಿ ಅವಘಡ ಸಂಭವಿಸಿದೆ. ಟೆಂಪಿ ನಗರ ಅಥೆನ್ಸ್‌ನಿಂದ 235 ಮೈಲುಗಳ ದೂರವಿದೆ. ಅಥೆನ್ಸ್‌ನಿಂದ ಥೆಸಲೋನಿಕಿ ನಗರಕ್ಕೆ ತೆರಳುತ್ತಿದ್ದ ಇಂಟರ್‌ಸಿಟಿ ಪ್ಯಾಸೆಂಜರ್‌ ರೈಲು ಹಾಗೂ ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ. ಪ್ರಬಲ ಅಪಘಾತದಿಂದ ಹಲವು ಬೋಗಿಗಳು ಹಳಿತಪ್ಪಿದ್ದು, ಇವುಗಳ ಪೈಕಿ 3 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತು ಎಂದು ಪೊಲೀಸರು ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗ್ಯಾರಂಟಿ ಯೋಜನೆಯಲ್ಲಿ ಭ್ರಷ್ಟಾಚಾರ, ಸಿಎಂಗೆ ಪತ್ರ ಬರೆದ ಆರ್ ಅಶೋಕ್

ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಶಾಕಿಂಗ್ ನಿರ್ಧಾರ

Gold Price: ಚಿನ್ನ, ಬೆಳ್ಳಿ ಬಲು ದುಬಾರಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪಟ್ಟಣ ಪಂಚಾಯತ್ ಎಲೆಕ್ಷನ್ ಬಿಜೆಪಿ ಭರ್ಜರಿ ಗೆಲುವು: ವಿಜಯೇಂದ್ರ ಖುಷಿ

ಮುಂದಿನ ಸುದ್ದಿ
Show comments