Select Your Language

Notifications

webdunia
webdunia
webdunia
webdunia

ಆಕಾಶದಲ್ಲಿ ಗುರು-ಶುಕ್ರ ಗ್ರಹಗಳ ಜೋಡಾಟ

ಆಕಾಶದಲ್ಲಿ ಗುರು-ಶುಕ್ರ ಗ್ರಹಗಳ ಜೋಡಾಟ
bangalore , ಗುರುವಾರ, 2 ಮಾರ್ಚ್ 2023 (13:38 IST)
ಕಣ್ಣಿಗೆ ಕಾಣುವ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳ ಜೋಡಾಟ ಆಕಾಶದಲ್ಲಿ ನಡೆಯುತ್ತಿದ್ದು, ಮಾರ್ಚ್​​  2 ರಂದು ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಎರಡೂ ಗ್ರಹಗಳು ಸುಂದರವಾಗಿ ಗೋಚರವಾಗಲಿವೆ ಎಂದು ಭೌತಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ. ಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಶುಕ್ರ ಗ್ರಹವು 20.5 ಕೋಟಿ ಕಿಲೋಮೀಟರ್​​ ದೂರದಲ್ಲಿದೆ. ಗುರು ಗ್ರಹ 86 ಕೋಟಿ ಕಿಲೋಮೀಟರ್​​​ ದೂರದಲ್ಲಿದೆ. ಗುರು ಗ್ರಹದ ಗಾತ್ರ ಶುಕ್ರ ಗ್ರಹಕ್ಕಿಂತ 1,400 ಪಟ್ಟು ದೊಡ್ಡದಿದೆ. ಸ್ವಯಂಪ್ರಭೆ ಇಲ್ಲದ ವಾತಾವರಣದಲ್ಲಿರುವ ಕಾರ್ಬನ್ ಗ್ರಹದ ಹಾಗೂ ಸಲ್ಫರ್ ಡೈ ಆಕ್ಸೆಡ್‌ನ ತೆಳು ಕವಚ 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಶುಕ್ರ ಗ್ರಹವು ಆಗಸ್ಟ್​​​ವರೆಗೂ ಬೇರೆ ಬೇರೆ ಎತ್ತರದಲ್ಲಿ ಗೋಚರಿಸಲಿದ್ದು, ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ನ್ಯೂ ಲುಕ್​​