Select Your Language

Notifications

webdunia
webdunia
webdunia
webdunia

ಇನ್ಸ್ಟಾಗ್ರಾಂ ನಲ್ಲಿ ವೀವ್ಸ್ ಹಾಗೂ ಫಾಲೋವರ್ಸ್ ಗಾಗಿ ಯುವಕರ ಡೆಡ್ಲಿ ವ್ಹೀಲಿಂಗ್

Youths Deadly Wheeling for Weaves and Followers on Instagram
bangalore , ಸೋಮವಾರ, 14 ನವೆಂಬರ್ 2022 (17:01 IST)
ಇತ್ತೀಚಿನ ದಿನಗಳಲ್ಲಿ ಯುವಕರಿಗೆ ವ್ಹೀಲಿಂಗ್ ಮಾಡುವುದು ಒಂದು ರೀತಿ‌ ಕ್ರೇಜ್ ಆಗೋಗಿದೆ.ರಸ್ತೆಯಲ್ಲಿ ಯುವಕರ ಹುಚ್ಚಾಟ ನೋಡಿದ್ರೆ ನಿಜಕ್ಕೂ ಎದೆ ಝಲ್ ಅನ್ನುತ್ತೆ .ವ್ಹೀಲಿಂಗ್ ಮಾಡಿ ಪ್ರತಿದಿನ ಇನ್ಸ್ಟಾಗ್ರಾಂ ನ್ನ ರೀಲ್ಸ್ ನಲ್ಲಿ  ಭೂಪರು ಅಪ್ ಲೋಡ್ ಮಾಡ್ತಾರೆ.ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ವಿಡಿಯೋ ಅಪ್ ಲೋಡ್ ಅದ್ರೂ ಈತನನ್ನ ಪೊಲೀಸರು ಬಂಧಿಸಿಲ್ಲ .
 
ವ್ಹೀಲಿಂಗ್ ನಿಂದ ಅಮಾಯಕರ ಪ್ರಾಣ ಹೋದ ಮೇಲೆ ಎಚ್ಚೆತ್ತು ಕೊಳ್ತಾರ ಪೊಲೀಸರು ?ಪೊಲೀಸರ ಗಮನಕ್ಕೆ ಬಂದ್ರೂ ಅತನನ್ನ ಪತ್ತೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವ್ಹೀಲಿಂಗ್ ಮಾಡಿ ಶೋ ಆಫ್ ಮಾಡ್ತಾನೆ.ಈತನ ಇನ್ಸ್ಟಾಗ್ರಾಂ ಖಾತೆಯ ತುಂಬೆಲ್ಲಾ ಕೇವಲ ವ್ಹೀಲಿಂಗ್ ವೀಡಿಯೋಸ್ .ವ್ಹೀಲಿಂಗ್ ಕ್ರೇಜ್ ಗಾಗಿ ಈತನ ಇನ್ಸ್ಟಾಗ್ರಾಂ ಖಾತೆಗೆ ಇದ್ದಾರೆ  22 ಸಾವಿರ ಜನ ಫಾಲೋವರ್ಸ್ .ಈ ರೀತಿಯ ಕ್ರೇಜ್ ಗಾಗಿ ಇನ್ನು ಸಾಕಷ್ಟು ಯುವಕರು ವ್ಹೀಲಿಂಗ್ ಹುಚ್ಚಾಟ ಮಾಡೋದು ಕಲಿಯುತ್ತಿದ್ದಾರೆ.
 
ಇನ್ನೂ ಇಂತವರಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರಾ ..?ಹೆಲ್ಮೆಟ್ ಧರಿಸೋಲ್ಲ, ಬೈಕ್ ಗೆ ನಂಬರ್ ಪ್ಲೇಟ್ ಕೂಡ ಇರೋದಿಲ್ಲ .ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದೀವಿ ಎಂದ ಪೊಲೀಸರು ಏನ್ಮಾಡ್ತಿದ್ದಾರೆ? ಹಾಗಾದ್ರೆ ಈ ರೀತಿ ಹುಚ್ಚಾಟ ಪೊಲೀಸರಿಗೆ ತೋರುತ್ತಿಲ್ವಾ..?ಅಥಾವ ಅಮಾಯಕರ ಜೀವ ಬಲಿಯಾದ ಮೇಲೆ ಎಚ್ಚೆತ್ತುಕೋಳ್ತಾರಾ ಪೊಲೀಸರು..? ಇನಾದ್ರು ಪೊಲೀಸರು ಎಚ್ಚೇತ್ತುಕೊಂಡು ಇಂತಹ ಹುಚ್ಚಾಟಕ್ಕೆ ಬ್ರೇಕ್ ಹಾಕ್ತಾರೆ ಅಂತಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದ ನಿರ್ಧಾರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹೊಟೇಲ್ ಉದ್ಯಮ