Publish Date: Wed, 10 May 2023 (17:21 IST)
Updated Date: Wed, 10 May 2023 (16:24 IST)
ವಿದ್ಯಾ ಸಂಜಯನಿ ಶಾಲೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ರು.ರಾಚೆನಹಳ್ಳಿಯಲ್ಲಿರುವ ವಿದ್ಯಾಸಂಚಯಿನಿ ಸ್ಕೂಲ್ ನಲ್ಲಿ ಪತ್ನಿ ಗೀತಕ್ಕ ಹಾಗೂ ಮಗಳ ಜೊತೆ ಕರುನಾಡ ಕಿಂಗ್ ವೋಟ್ ಮಾಡಿದ್ರು.
ಮತದಾನದ ಬಳಿಕ ನಟ ಶಿವರಾಜ್ ಕುಮಾರ್ ಇವತ್ತು ನಾನು ವೋಟ್ ಮಾಡಿದ್ದೇನೆ.ಸಂಜೆಯವರೆಗೆ ಮತದಾನಕ್ಕೆ ಅವಕಾಶವಿದೆ.ಯಾರು ಇನ್ನು ವೋಟ್ ಮಾಡಿಲ್ಲ. ಎಲ್ಲರೂ ಬಂದು ವೋಟ್ ಮಾಡಿ.ಹೆಚ್ಚಿನ ಮತದಾನವಾದ್ರೆ ಒಳ್ಳೆಯ ಅಭ್ಯರ್ಥಿ ಆಯ್ಕೆ ಆಗ್ತಾರೆ.ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತದಾನ ಮಾಡಿ .ನಿಮ್ಮ ವೋಟ್ ವೇಸ್ಟ್ ಮಾಡಿಕೊಳ್ಳಬೇಡಿ ಎಂದು ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ