Select Your Language

Notifications

webdunia
webdunia
webdunia
webdunia

ನಿಮ್ಮ ನಂಬಿಕೆಯೇ ನನ್ನ ಶಕ್ತಿ: ವಾರಣಾಸಿ ಜನತೆಗೆ ಮೋದಿ ನಮನ

ನಿಮ್ಮ ನಂಬಿಕೆಯೇ ನನ್ನ ಶಕ್ತಿ: ವಾರಣಾಸಿ ಜನತೆಗೆ ಮೋದಿ ನಮನ

Sampriya

ವಾರಣಾಸಿ , ಮಂಗಳವಾರ, 18 ಜೂನ್ 2024 (20:23 IST)
ವಾರಣಾಸಿ: ಮೂರನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಿದರು.

ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅವರ ನಂಬಿಕೆ ನನ್ನ ದೊಡ್ಡ ಆಸ್ತಿಯಾಗಿದ್ದು, ಇದು ಅವರ ಕನಸನ್ನು ನನಸಾಗಿಸಲು ಶ್ರಮಿಸುವಂತೆ ಪ್ರೇರೇಪಿಸುತ್ತದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಅಧಿಕಾರದಲ್ಲಿದ್ದಾರೆ.

"ನಿಮ್ಮ ನಂಬಿಕೆಯು ನನ್ನ ದೊಡ್ಡ ಆಸ್ತಿಯಾಗಿದೆ ಮತ್ತು ಇದು ನಿಮಗೆ ಸೇವೆ ಸಲ್ಲಿಸಲು, ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಲು ನನಗೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಕನಸುಗಳು ಮತ್ತು ನಿಮ್ಮ ಗುರಿಗಳನ್ನು ಈಡೇರಿಸಲು ನಾನು ಹಗಲಿರುಳು ಶ್ರಮಿಸುತ್ತೇನೆ" ಎಂದು ಪ್ರಧಾನಿ ಮೋದಿ ವಾರಣಾಸಿಯಲ್ಲಿ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್