Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ 3ನೇ ಅವಧಿಗೆ ನೇಮಕ

Ajit Doval

Sampriya

ನವದೆಹಲಿ , ಗುರುವಾರ, 13 ಜೂನ್ 2024 (18:02 IST)
Photo Courtesy X
ನವದೆಹಲಿ: ದೇಶದ ಟ್ರಬಲ್‌ ಶೂಟರ್‌ ಎಂದೇ ಹೆಸರು ಗಳಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಕೇಂದ್ರ ಸರ್ಕಾರವು ಮೂರನೇ ಅವಧಿಗೂ ಸಲೆಹೆಗಾರರನ್ನಾಗಿ ನೇಮಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿ ಪಿ.ಕೆ.ಮಿಶ್ರಾ ಅವರೇ ಮುಂದುವರಿಯಲಿದೆ. ಇವರ ನೇಮಕದ ಕುರಿತು ಕೂಡ ಸರ್ಕಾರ ಆದೇಶ ಹೊರಡಿಸಿದೆ.

ಪಾಕಿಸ್ತಾನದ ಉಗ್ರರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್, ಬಾಲಾಕೋಟ್‌ ವಾಯುದಾಳಿ ಸೇರಿ ಹಲವು ಕಾರ್ಯಾಚರಣೆಗಳ ಸೂತ್ರಧಾರಿ ಅಜಿತ್ ದೋವಲ್‌ ಅವರನ್ನು ಮೂರನೇ ಅವಧಿಗೆ ನೇಮಿಸಿರುವ ಕುರಿತು ಸಂಪುಟದ ನೇಮಕಾತಿ ಸಮಿತಿಯು ಜೂನ್‌ 10ರಂದೇ ಆದೇಶ ಹೊರಡಿಸಿದೆ.

ನೂತನ ಆದೇಶದ ಪ್ರಕಾರ, ಅಜಿತ್‌ ದೋವಲ್‌ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೆ ಅಥವಾ ಮುಂದಿನ ಆದೇಶದವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇರಲಿದ್ದಾರೆ. ಇದೇ ನಿಯಮವು ಪಿ.ಕೆ.ಮಿಶ್ರಾ ಅವರಿಗೂ ಅನ್ವಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಜಿತ್‌ ದೋವಲ್‌ ಅವರು 1968ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದು, ಕೇಂದ್ರ ಸರ್ಕಾರದ ಮಿಲಿಟರಿ, ಇಂಟಲಿಜೆನ್ಸ್‌ ಸೇರಿ ಹಲವು ವಿಭಾಗಗಳಲ್ಲಿ ಮಹತ್ವದ ಸಲಹೆ-ಸೂಚನೆ ನೀಡುತ್ತಾರೆ. ಇನ್ನು ಡಾ.ಪಿ.ಕೆ.ಮಿಶ್ರಾ ಅವರು 1972ರ ಬ್ಯಾಚ್‌ ಅಧಿಕಾರಿಯಾಗಿದ್ದು, ಪಿಎಂಒದ ಪ್ರಮುಖ ನೇಮಕಾತಿಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಆಡಳಿತಾತ್ಮಕ ವಿಚಾರಗಳ ಹೊಣೆಯೂ ಇವರದ್ದೇ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಚಂದ್ರಬಾಬು ನಾಯ್ಡು