Daily Horoscope

Select Your Language

Notifications

webdunia
webdunia
webdunia
webdunia

ಕಿಲ್ಲರ್ ಕೊರೊನಾಗೆ ಯುವತಿ ಬಲಿ

ಕೊರೊನಾ
ಡೆಡ್ಲಿ ಕೊರೊನಾಗೆ 17 ವರ್ಷದ ಯುವತಿಯೊಬ್ಬಳು ಬಲಿಯಾಗಿದ್ದಾಳೆ.

ಕಲಬುರಗಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 8 ಜನ, ಸಾರಿ ಹಿನ್ನಲೆಯ ಓರ್ವ ಯುವಕ ಹಾಗೂ ಸೋಂಕಿನ ಮೂಲ ಪತ್ತೆಯಾಗದ ಓರ್ವ ಯುವತಿ ಸೇರಿದಂತೆ ಒಟ್ಟು 10 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಇನ್ನು, ಆಳಂದ ಪಟ್ಟಣದ ಕುಂಬಾರಗಲ್ಲಿಯ ನಿವಾಸಿ 17 ವರ್ಷದ ಯುವತಿ (ಪಿ-5900) ಜೂನ್ 4 ರಂದು ಜ್ವರ, ತಲೆನೋವು, ಊಸಿರಾಟ ತೊಂದರೆ ಹಾಗೂ ನರ ಸಂಬಂಧಿತ ಕಾಯಿಲೆಯ ಹಿನ್ನೆಲೆಯೊಂದಿಗೆ ಜಿಮ್ಸ್ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿರುತ್ತಾರೆ. ಯುವತಿಗೆ ತಗುಲಿದ ಸೋಂಕಿನ ಮೂಲ ಪತ್ತೆ ಕಾರ್ಯ ನಡೆದಿದೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 769 ಕ್ಕೆ ಏರಿದೆ.  ಇದರಲ್ಲಿ ಇದೂವರೆಗೆ 213 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ ರದ್ದು : 90 ಲಕ್ಷ ವಿದ್ಯಾರ್ಥಿಗಳು ಪಾಸ್