Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಯುವತಿ ಮೇಲೆ ಗ್ಯಾಂಗ್‌ರೇಪ್

Young woman gang-raped in Bangalore
ಬೆಂಗಳೂರಿನಲ್ಲೊಂದು ಪೈಶಾಚಿಕ ಕೃತ್ಯ ನಡೆದಿದ್ದು ಕೇರಳ ಮೂಲದ ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಇಬ್ಬರು ಯುವಕರಿಂದ ಶುಕ್ರವಾರ ರಾತ್ರಿ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್‌ನ ಸಂಸ್ಥೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಶುಕ್ರವಾರ ರಾತ್ರಿ ರಾಪಿಡೋ ಬೈಕ್‌ಗೆ ಬುಕ್ ಮಾಡಿದ್ದಳು. ಬಿಟಿಎಂ ಲೇಔಟ್‌ನಿಂದ ನಿಲಾದ್ರಿ ನಗರಕ್ಕೆ ಬುಕ್ ಮಾಡಿದ್ದಳು. ಈ ವೇಳೆ ಯುವತಿ ಮದ್ಯಪಾನ ಮಾಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದಳು ಅಂತಾ ಹೇಳಲಾಗಿದೆ. ಬೈಕ್‌ನಲ್ಲಿ ಕೂರಿಸಿಕೊಂಡ ಯುವಕ ಡ್ರಾಪ್ ಪಾಯಿಂಟ್‌ಗೆ ತಲುಪಿಸದೇ ಸ್ನೇಹಿತನ ಸಹಾಯದಿಂದ ರೂಮಿಗೆ ಕರೆದುಕೊಂಡು ಹೋಗಿದ್ದಾನಂತೆ. ನಿಲಾದ್ರಿ ನಗರದಲ್ಲಿ ತನ್ನ ರೂಮಿಗೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ. ನಂತರ ಪ್ರಜ್ಞೆ ಬಂದ ಬಳಿಕ ಯುವತಿಯನ್ನ ಅಲ್ಲಿಗೆ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೂ. 7 ಲಕ್ಷ ಮೌಲ್ಯದ ನೆಕ್ಲೇಸ್​ ಕದ್ದ ಮಹಿಳೆ