Select Your Language

Notifications

webdunia
webdunia
webdunia
webdunia

ತನ್ನ ತಂಟೆಗೆ ಬಂದ್ರೆ ಬೆತ್ತಲೆ ಮೆರವಣಿಗೆ ಮಾಡ್ತೀನಿ: ಶಾಸಕ ರಾಜು ಕಾಗೆ ಹೀಗೆ ಹೇಳಿದ್ದು ಯಾರಿಗೆ

ತನ್ನ ತಂಟೆಗೆ ಬಂದ್ರೆ ಬೆತ್ತಲೆ ಮೆರವಣಿಗೆ ಮಾಡ್ತೀನಿ: ಶಾಸಕ ರಾಜು ಕಾಗೆ ಹೀಗೆ ಹೇಳಿದ್ದು ಯಾರಿಗೆ

Sampriya

ಬೆಳಗಾವಿ , ಮಂಗಳವಾರ, 3 ಸೆಪ್ಟಂಬರ್ 2024 (14:20 IST)
Photo Courtesy X
ಬೆಳಗಾವಿ: ಕುಡುಚಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಅವರು ನಾಲಿಗೆ ಹರಿಬಿಟ್ಟು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತನ್ನ ತಂಟೆಗೆ ಬಂದರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ‌ ಮೆರವಣಿಗೆ ಮಾಡುತ್ತೇನೆ ಎಂದು ಬಿಜೆಪಿಯ ಮಾಜಿ‌ ಶಾಸಕ ಶ್ರೀಮಂತ ಪಾಟೀಲ್‌ ವಿರುದ್ಧ ರಾಜು ಕಾಗೆ ವಾಗ್ದಾಳಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜು ಕಾಗೆ, ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇಲ್ಲ. ನೀನು ನನ್ನ ಬಗ್ಗೆ ಮಾತನಾಡ ಬೇಡ, ಅಪ್ಪಿ-ತಪ್ಪಿ ಮಾತನಾಡಿದರೆ ನಾನು ನಿನ್ನ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ ಎಂದು ಶ್ರೀಮಂತಪಾಟೀಲ್‌ ವಿರುದ್ಧ ಕೆಂಡಕಾರಿದರು.

ನೀನು ಬಹಳ ಸತ್ಯ ಹರಿಶ್ಚಂದ್ರ ತರಹ ಮಾತನಾಡುತ್ತಿದ್ದೀಯಾ. ನಿಮ್ಮ ಕಾರ್ಖಾನೆಯಲ್ಲಿ ಕಾಟಾ ಯಾರು ಹೊಡೆದ್ರಿ? ಕಾರ್ಮಿಕರ ದುಡ್ಡಿನಲ್ಲಿ ಹುಟ್ಟು ಹಬ್ಬ ಆಚರಿಸಿದವರು ಯಾರು? ಎಂದು ಪ್ರಶ್ನಿಸಿದರು.  

ಮಾಜಿ ಶಾಸಕ ಶ್ರೀಮಂತ ಪಾಟೀಲ್ ಈ ಹಿಂದೆ ರಾಜು ಕಾಗೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರದಿಂದ ಸಂತ್ರಸ್ತೆ ಮೃತಪಟ್ಟರೆ ಅಪರಾಧಿಗೆ ಮರಣದಂಡನೆ ಶಿಕ್ಷೆ: ಹೊಸ ಮಸೂದೆ ಮಂಡನೆ