Daily Horoscope

Select Your Language

Notifications

webdunia
webdunia
webdunia
webdunia

ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ: ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

HD Kumraswamy
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಧಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ (ಟ್ವಿಟರ್) ಮೂಲಕ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಕುಮಾರಸ್ವಾಮಿ ಅವರು, ಸರ್ಕಾರದ ಆಡಳಿತ ವೈಖರಿ ಹಾಗೂ ಗೃಹ ಇಲಾಖೆಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.
 
ಕುಮಾರಸ್ವಾಮಿ ಅವರು ತಮ್ಮ ಪೋಸ್ಟ್‌ನಲ್ಲಿ, "ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣ ಆಗಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ "ಮಿಸ್ಟರ್ ತುಘಲಕ್.. ವಿಷಯಾಂತರ ಕಿಡಿಗೇಡಿಗಳ ಲಕ್ಷಣ. ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ? ನೇರವಾಗಿ ಯುದ್ಧ ಮಾಡಿ. ಪಲಾಯನ ಏಕೆ? ಪಡಿಪಾಟಲು ಯಾಕೆ?" ಎಂದು ಪ್ರಶ್ನಿಸಿದ್ದಾರೆ.
 
ಮುಂದುವರಿದು ವಾಗ್ದಾಳಿ ನಡೆಸಿರುವ ಅವರು, "ಸುಳ್ಳುಸುದ್ದಿ ಶೂರ.. ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ? ನೀವು, ನಿಮ್ಮಪ್ಪ, ನಿಮ್ಮ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್!! ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ. ಅರೆರೆ.. ಎಂಥಾ ಐನಾತಿ ಐಡಿಯಾ? ಅತಿಜಾಣ ಗ್ರಹಣ ಮಂತ್ರಿ!!" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಸರ್ಕಾರದ ತನಿಖಾ ಪ್ರಕ್ರಿಯೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಎಚ್.ಡಿ. ಕುಮಾರಸ್ವಾಮಿ, "ನನ್ನ ಅನುಮಾನ ಏನೆಂದರೆ, ನಿಮ್ಮ ತನಿಖೆಯೇ ಸ್ಟಿಂಗ್ ಆಗುತ್ತಿದೆ! ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ. ರೀ ತುಘಲಕ್.. ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ" ಎಂದು ಕಡಕ್‌ ಎಚ್ಚರಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಿನ ಪಾರ್ಕಿಂಗ್ ಸೆನ್ಸಾರ್ ಸದ್ದಿಗೆ ರೊಚ್ಚಿಗೆದ್ದ ವ್ಯಕ್ತಿ: ನೆರೆಮನೆಯಾಕೆಯ ಕಾರಿಗೆ ಬೆಂಕಿ ಹಚ್ಚಿ ವಿಡಿಯೋ ತೆಗೆಯುತ್ತಾ ನಿಂತ Video