ಬೆಂಗಳೂರು: ಬಿಜೆಪಿಯವರು ನಮಗೆ ಪಾಠ ಹೇಳಿಕೊಡುವುದು ಬೇಡ, ಅವರೇ ಬಳ್ಳಾರಿಯನ್ನ ʻರಿಪಬ್ಲಿಕ್ ಆಫ್ ಬಳ್ಳಾರಿʼ ಮಾಡಿದ್ದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದರು.
ಬಳ್ಳಾರಿ ಗಲಾಟೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಯಾವುದು ಇಲ್ಲ. ಅಲ್ಲಿ ಗಲಾಟೆ ಆಗಿದ್ದು ನಿಜ, ಬಳ್ಳಾರಿ ಎಸ್ಪಿ ಕರ್ತವ್ಯ ಲೋಪ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಈಗಾಗಲೇ ಸಿಎಂ, ಡಿಸಿಎಂ, ಗೃಹ ಸಚಿವರು ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದ ಹೇಳಿದರು.
ನಮಗೆ ಕಾನೂನು ಪಾಠ ಹೇಳ್ತಾರಾ. ಆ ಭಾಗ ಹಾಳು ಮಾಡಿದವರು ನಮಗೆ ಕಾನೂನು ಸಂವಿಧಾನ ಹೇಳಿ ಕೊಡ್ತಾರಾ. ಪೋಸ್ಟರ್ ಹಾಕಿದ್ರೆ ಏನ್ ತಪ್ಪು. ಹೆಸರಿಗೆ ಮಾತ್ರ ರಾಮನ ಜಪ ಮಾಡೋದು ಅಲ್ಲ. ರಾಮಾಯಣ ಬರೆದ ವಾಲ್ಮೀಕಿ ಪೋಸ್ಟರ್ ಸಹಿಸೋಕೆ ಆಗೊಲ್ಲವಾ? ಸಾರ್ವಜನಿಕರಿಗೆ ಅನಾನುಕೂಲ ಮಾಡಬಾರದು ಇಂತಹ ವಾತಾವರಣ ಸೃಷ್ಟಿ ಮಾಡೋದು ಸರಿಯಲ್ಲ ಅಂತ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು ಎಂದರು.