Select Your Language

Notifications

webdunia
webdunia
webdunia
webdunia

ಬಳ್ಳಾರಿ ಗಲಭೆ ವಿಚಾರ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Ballari Violence Issue

Sampriya

ಬಳ್ಳಾರಿ , ಶುಕ್ರವಾರ, 2 ಜನವರಿ 2026 (18:17 IST)
Photo Credit X
ಬಳ್ಳಾರಿ: ಇಲ್ಲಿನ ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ನಡೆದ ಘರ್ಷಣೆ ಹಾಗೂ ಕೈ ಕಾರ್ಯಕರ್ತನ ಸಾವಿನ ಸಂಬಂಧ ಈಗಾಗಲೇ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ  ಪೊಲೀಸ್ ಮಹಾನಿರ್ದೇಶಕರು ಹಿತೇಂದ್ರ ಆರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸಂಬಂಧ ಪ್ರತ್ಯೇಕ ದೂರು ಆಧರಿಸಿ ಮೂರು ಪ್ರಕರಣ, ಒಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಯುವಕನ ಸಾವು, ಮಹರ್ಷಿ ವಾಲ್ಮೀಕಿಗೆ ಅಪಮಾನ, ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣದಡಿಯಲ್ಲಿ ಬಳ್ಳಾರಿಯ ರಾಜಕೀಯ ಮುಖಂಡರ ಖಾಸಗಿ ಅಂಗರಕ್ಷಕರ ಐದು  ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಆಪ್ತರ ಬಂದೂಕುಗಳನ್ನೂ ಪತ್ತೆ ಮಾಡಲಾಗುತ್ತಿದೆ. ಸದ್ಯ ಸಿಕ್ಕಿರುವ ಬಂದೂಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ಜನಾರ್ದನ ರೆಡ್ಡಿ ಅವರ ಬಳಿ ಬಂದೂಕು ಇಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು, ಗರ್ಭಿಣಿ ಚಿರತೆ ಸಾವು, ತನಿಖೆಗೆ ಈಶ್ವರ್ ಬಿ ಖಂಡ್ರ ಆದೇಶ