ಬೆಂಗಳೂರು : ಪೋಷಕರಿಂದ ಹಣ ಸುಲಿಗೆ ಮಾಡಲು 16 ವರ್ಷದ ಹುಡುಗ ತನ್ನನ್ನು ತಾನೇ ಅಪಹರಣ ಮಾಡಿದ ಘಟನೆ ಕನಕಪುರದಲ್ಲಿ ನಡೆದಿದೆ.
ಅಕ್ಷಯ್ ಇಂತಹ ಕೃತ್ಯ ಎಸಗಿದ ಆರೋಪಿ. ಈತ ತಿರುಪತಿಗೆ ತೆರಳಿ ಅಲ್ಲಿ ತನ್ನ ತಂದೆಯ ವಾಟ್ಸಾಪ್ ಗೆ ತನ್ನ ಕೈಕಾಲು ಕಟ್ಟಿದ ಅರೆಬೆತ್ತಲೆ ಫೋಟೊವನ್ನು ಹಾಕಿ 5 ಲಕ್ಷ ರೂ ನೀಡುವಂತೆ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ತಂದೆ ಪೊಲಿಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಹುಡುಗನ ಪತ್ತೆಗೆ ಬಲೆ ಬೀಸಿದ್ದಾರೆ. ಆಗ ಹುಡುಗ ತಿರುಪತಿಯ ಲಾಡ್ಜ್ ನಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಪೊಲಿಸರು ಹುಡುಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣ ತಾನು ಹೀಗೆ ಮಾಡಿರುವುದಾಗಿ ಹುಡುಗ ಒಪ್ಪಿಕೊಂಡಿದ್ದಾನೆ.