Select Your Language

Notifications

webdunia
webdunia
webdunia
webdunia

ನಿಮ್ಮ ವಾಟ್ಸಪ್, ಜಾಲತಾಣಗಳ ಮೇಲೆ ಖಾಕಿ ಕಣ್ಣಿದೆ

ನಿಮ್ಮ ವಾಟ್ಸಪ್, ಜಾಲತಾಣಗಳ ಮೇಲೆ ಖಾಕಿ ಕಣ್ಣಿದೆ
ಹುಬ್ಬಳ್ಳಿ , ಶನಿವಾರ, 21 ಡಿಸೆಂಬರ್ 2019 (18:56 IST)
ಟ್ವಿಟ್ಟರ್, ವಾಟ್ಸಪ್ ಹಾಗೂ ಜಾಲತಾಣಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನೆಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದ ಹಾಳು ಮಾಡುವ ಪೋಸ್ಟ್ ಗಳನ್ನು ಯಾರಾದರೂ ಹರಿಬಿಟ್ಟರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಹೀಗಂತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಎಚ್ಚರಿಕೆ ನೀಡಿದ್ದಾರೆ.

ಫೇಸ್​ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಏನಾದರು ಪೋಸ್ಟ್ ಮಾಡಿ ಶಾಂತತೆಯನ್ನು ಹದಗೆಡಿಸುತ್ತಾರೆ ಎಂಬುವುದರ ಸಲುವಾಗಿ ಹು-ಧಾ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. 

ಯಾವುದೇ ಒಂದು ಕೋಮು ಪರವಾಗಿ ಮತ್ತೊಂದು ಕೋಮಿನ ವಿರುದ್ಧವಾದ ಪೋಸ್ಟ್​ಗಳನ್ನು ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಈಗಾಗಲೇ ಪ್ರಚೋದನಾಕಾರಿ ಪೋಸ್ಟ್ ಮಾಡಿರುವ ಕೆಲ ಯುವಕರನ್ನು ಗುರುತಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 3ನೇ ವಾರದಲ್ಲಿ ಬೃಹತ್ ಉದ್ಯೋಗ ಮೇಳ