ಕಾರವಾರ: ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಲಾರಿ ದಟ್ಟ ಮಂಜಿನಿಂದಾಗಿ ಪಲ್ಟಿಯಾದ ಪರಿಣಾಮ 9 ಮಂದಿ ದುರ್ಮರಣಕ್ಕೀಡಾಗ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಬುಧವಾರ ಬೆಳ್ಳಂ ಬೆಳಿಗ್ಗೆ ಅಪಘಾತ ಸಂಭವಿಸಿದೆ. ವಿಪರೀತ ಮಂಜು ಇದ್ದಿದ್ದರಿಂದ ಚಾಲಕನಿಗೆ ಸರಿಯಾಗಿ ರಸ್ತೆ ಕಾಣಿಸುತ್ತಿರಲಿಲ್ಲ. ತರಕಾರಿ ಲಾರಿಯಲ್ಲಿ ಸುಮಾರು 25 ಜನರು ಪ್ರಯಾಣಿಸುತ್ತಿದ್ದರು. ಈ ಪೈಕಿ 9 ಜನರು ಸಾವನ್ನಪ್ಪಿದ್ದು 15 ಜನರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ಲಾರಿ ಸವಣೂರಿನಿಂದ ಕುಮಟಾ ಕಡೆಗೆ ಸಂಚಿರಿಸುತ್ತಿತ್ತು ಎನ್ನಲಾಗಿದೆ. ಮೃತರು ಸವಣೂರಿನವರು ಎಂಬ ಮಾಹಿತಿಯಿದೆ. ಘಟನೆ ಸ್ಥಳಕ್ಕೆ ತಕ್ಷಣವೇ ಪೊಲೀಸರು ಬಂದಿದ್ದು, ಪರಿಹಾರ ಕಾರ್ಯ ನಡೆಸಿದ್ದಾರೆ. ಲಾರಿಯೆಡೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಲಾರಿ ತುಂಬಾ ವೇಗವಾಗಿ ಬರುತ್ತಿದ್ದರಿಂದ ದುರಂತ ಸಂಭವಿಸಿರಬಹುದು ಶಂಕಿಸಲಾಗಿದೆ.