ಬೆಂಗಳೂರು: ಬಿಜೆಪಿ ಹೈಕಮಾಂಡ್ ಬುದ್ಧಿ ಹೇಳಿದರೂ ರಾಜ್ಯದ ರೆಬೆಲ್ ನಾಯಕರು ಬಿವೈ ವಿಜಯೇಂದ್ರ ಮೇಲೆ ಕಿಡಿ ಕಾರುವುದು ಬಿಟ್ಟಿಲ್ಲ. ಇದರ ಬಗ್ಗೆ ಈಗ ಬಿಎಸ್ ಯಡಿಯೂರಪ್ಪ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಮೊನ್ನೆಯಷ್ಟೇ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಬಂಡಾಯ ನಾಯಕರು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ಈ ವೇಳೆ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದು ಬೇಡ ಎಂದಿದ್ದರು. ಇದಕ್ಕೆ ಯತ್ನಾಳ್ ಕೂಡಾ ಒಪ್ಪಿಕೊಂಡಿರುವುದಾಗಿ ಹೇಳಿದ್ದರು.
ಆದರೆ ಮತ್ತೆ ಯತ್ನಾಳ್ ಆಂಡ್ ಟೀಂ ತಮ್ಮ ಚಾಳಿ ಮುಂದುವರಿಸಿದೆ. ಈಗಲೂ ವಿಜಯೇಂದ್ರ ಮೇಲೆ ಕಿಡಿ ಕಾರುತ್ತಲೇ ಇದೆ. ಇಂದು ರಮೇಶ್ ಜಾರಕಿಹೊಳಿ ಆ ಹುಡುಗ ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ಲಾಯಕ್ಕಿಲ್ಲ. ಯಡಿಯೂರಪ್ಪ ನಾಮಬಲದಿಂದ ಅಧ್ಯಕ್ಷರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ ವಿಜಯೇಂದ್ರ ರಾಜ್ಯಾಧ್ಯಕ್ಷ ಮಾಡಿದ್ದು ನಾನಲ್ಲಾರೀ.. ಹೈಕಮಾಂಡ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ರಾಜ್ಯದ ಜನತೆಯ ಆಶೀರ್ವಾದವೂ ಅವರಿಗಿದೆ. ನೀವೇ ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ನೋಡಿದ್ದೀರಲ್ಲಾ ಎಂದು ಯಡಿಯೂರಪ್ಪ ಹೇಳಿದ್ದಾರೆ.