Select Your Language

Notifications

webdunia
webdunia
webdunia
webdunia

ಜುಲೈ 16ರಂದು ಕಾರವಾರಕ್ಕೆ ಯಡಿಯೂರಪ್ಪ ಭೇಟಿ

ಜುಲೈ  16ರಂದು ಕಾರವಾರಕ್ಕೆ ಯಡಿಯೂರಪ್ಪ ಭೇಟಿ
ಕಾರವಾರ , ಭಾನುವಾರ, 11 ಜುಲೈ 2021 (07:46 IST)
ಕಾರವಾರ (ಜು. 11): ಮುಖ್ಯಮಂತ್ರಿಯಾದ ನಂತರ ಇದೇ ಪ್ರಥಮ ಬಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾರವಾರಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಜುಲೈ 16ರಂದು ನಗರಕ್ಕೆ ಸಿಎಂ ಆಗಮಿಸಲಿರುವ ಸಿಎಂ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ಮಾರ್ಚ್ ತಿಂಗಳನಲ್ಲಿಯೇ ಜಿಲ್ಲೆಯ ಶಾಸಕರು, ಉಸ್ತುವಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಲಿಖಿತ ಮನವಿ ಮಾಡಿ, ಕ್ಷೇತ್ರಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವಂತೆ ಕೋರಿದ್ದರು. ಆ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕಾರವಾರಕ್ಕೆ ಆಗಮಿಸಿ ಉದ್ಘಾಟನೆ ನೆರವೇರಿಸಲು ಸಮ್ಮತಿಸಿದ್ದರು. ಆದರೆ ಬೆಳಗಾವಿ ಉಪಚುನಾವಣೆ, ಕೊರೋನಾ ಹೆಚ್ಚಳ ಇನ್ನಿತರ ಕಾರಣದಿಂದ ಸಿಎಂ ಗೆ ಬರಲು ಸಾಧ್ಯವಾಗಿರಲಿಲ್ಲ. ಮತ್ತೆ ಸಿಎಂಗೆ ಶಾಸಕರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಜುಲೈ 16ರಂದು ಮುಖ್ಯಮಂತ್ರಿಗಳು ಕಾರವಾರ ಬರಲಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮುಖ್ಯಮಂತ್ರಿ ಅವರ ಕಾರ್ಯಾಲಯದಿಂದ ಪತ್ರ ಬರೆದು ಅಧಿಕೃತ ಮಾಹಿತಿ ನೀಡಲಾಗಿದೆ.
ಸಿಎಂ ಯಡಿಯೂರಪ್ಪ ಕಾರವಾರ ಮೆಡಿಕಲ್ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ 450 ಹಾಸಿಗೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ಕಾಮಗಾರಿ, ಮಾಲಾದೇವಿ ಮೈದಾನ ಮೇಲ್ದರ್ಜೆಗೇರಿಸುವ ಕಾಮಗಾರಿ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ, ಲೊಕೋಪಯೋಗಿ ಇಲಾಖೆ ನೂತನ ಕಟ್ಟಡ ಹಾಗೂ ಪ್ರವಾಸಿ ಮಂದಿರ ನೂತನ ಕಟ್ಟಡ ಕಾಮಗಾರಿ,  ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸುಮಾರು 200 ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಅಂಕೋಲಾ ತಾಲೂಕಿನಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಿತ್ತೂರು ಶಾಲೆಯ ಕಟ್ಟಡವನ್ನ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಚನ್ನಬಸವೇಶ ತಿಳಿಸಿದ್ದಾರೆ.
ಹೊನ್ನಾವರ ಖಾಸಗಿ ಬಂದರು ನಿರ್ಮಾಣದ ವಿರೋಧ ಅಲೆ ಬಿಸಿ ತಟ್ಟಬಹುದೆ?
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರಕಾರ ಈ ಬಗ್ಗೆ ಮೀನುಗಾರರ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದೆ ಈಹಿನ್ನಲೆಯಲ್ಲಿ ಸಿಎಮ್ ಬಂದ ಸಂದರ್ಭದಲ್ಲಿ ಇಲ್ಲಿನ ಮೀನುಗಾರರು ಮುಖ್ಯ ಮಂತ್ರಿಗಳಿಗೆ  ಬಂದರು ನಿರ್ಮಾಣ ಕೈ ಬಿಡುವಂತೆ ಅಥವಾ ತಮ್ಮ ಕೆಲ ಬೇಡಿಕೆ ಇಡೇರಿಸುವಂತೆ ಆಹ್ರಹಿಸಿ ಮನವಿ ಸಲ್ಲಿಸುವ ಲಕ್ಷಣ ಈಹಿನ್ನಲೆಯಲ್ಲಿ ಮೀನುಗಾರರಿಗೆ ಮುಖ್ಯಮಂತ್ರಿಗಳು ಯಾವ ಭತವಸೆ ನೀಡಲಿದ್ದಾರೆ ಎಂದು ಕಾದು ನೋಡಬೇಕು.
ಕಳೆದ ಒಂದೂವರೆ ವರ್ಷದ ಹಿಂದೆ  ಮಳೆಗಾಲದಲ್ಲಿಯೇ ರದ್ದಾದ ಸಿಎಮ್ ಕಾರ್ಯಕ್ರಮ2019ರಲ್ಲಿ ಮುಖ್ಯ ಮಂತ್ರಿಗಳು ಕಾರವಾರಕ್ಕೆ ಬರುವ ಕಾರ್ಯಕ್ರಮ ಇತ್ತು ಆದ್ರೆ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾದ ಕಾರಣ ಸಿಎಂ ಕಾರ್ಯಕ್ರಮ ದಿಢೀರ್ ರದ್ದಾಗಿತ್ತು ಸಿಎಮ್ ಬರುವಿಕೆಗಾಗಿ ಕಾದು ಕುಳಿತಿದ್ದ ಬಿಜೆಪಿ ಮುಖಂಡರು ನಿರಾಸೆಯಿಂದ ಹಿಂದುರಿಗಿದ್ದರು. ಈಗಲು ಕೂಡಾ ಮಳೆ ಮನ್ಸೂಚನೆ ಹವಮಾನ ಇಲಾಖೆ ನೀಡಿದೆ. ಮತ್ತೆ ಕಾರ್ಯಕ್ರಮ ರದ್ದಾಗದೆ ಇದ್ದರೆ ಸಾಕು ಎಂದಿದ್ದಾರೆ ಇಲ್ಲಿನ ಬಿಜೆಪಿ ನಾಯಕರು.

Share this Story:

Follow Webdunia kannada

ಮುಂದಿನ ಸುದ್ದಿ

ರೌಡಿಶೀಟರ್ ಗೆ ಕಪಾಳ ಮೋಕ್ಷ