ಯಡಿಯೂರಪ್ಪ ಮುಗ್ಧರಂತೆ, ಕುತಂತ್ರ ಅವ್ರಿಗೆ ಗೊತ್ತಿಲ್ಲವಂತೆ!

Webdunia
ಭಾನುವಾರ, 10 ಫೆಬ್ರವರಿ 2019 (14:30 IST)
ಯಡಿಯೂರಪ್ಪ ಮುಗ್ಧ. ಕುತಂತ್ರ ಗೊತ್ತಿಲ್ಲದವರು. ಕುರ್ಚಿ ಉಳಿಸಿಕೊಳ್ಳಲು ಸಿಎಂ ಈ ರೀತಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಆರೋಪ ಮಾಡಿದ್ದಾರೆ.

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದಾ ಕಾಲ ಐಷಾರಾಮಿ ಜೀವನ ನಡೆಸುತ್ತಾರೆ. ಈಗ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಜನರಲ್ಲಿ ಅಸಹ್ಯ ಭಾವನೆ ಹುಟ್ಟಿಸಿದೆ ಎಂದು ಶಾಸಕ ಶ್ರೀರಾಮುಲು  ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಗ್ಧ. ಕುತಂತ್ರ ಗೊತ್ತಿಲ್ಲದವರು. ಕುರ್ಚಿ ಉಳಿಸಿಕೊಳ್ಳಲು ಸಿಎಂ ಈ ರೀತಿ ಮಾಡಿದ್ದಾರೆ. ಆಡಿಯೋ ಬಿಡುಗಡೆ ಮಾಡುವಾಗ ನಾನೇ ಮಾಡಿಸಿದ್ದು ಅಂತಾರೆ. ಧರ್ಮಸ್ಥಳಕ್ಕೆ ಹೋದಾಗ ಅದು ಯಡಿಯೂರಪ್ಪ ಅವರದ್ದು ಅಂತಾ ನಾನು ಹೇಳಿಲ್ಲ ಅಂತಾರೆ.

ರಾಜ್ಯದ ಬಜೆಟ್ ಮಂಡಿಸುವಾಗ ಆಡಿಯೋ ಬಿಡುಗಡೆ ಮಾಡೋದು ಮುಖ್ಯನಾ? ಬಜೆಟ್‌ಗಿಂತ ಆಡಿಯೋ ಮುಖ್ಯ ಆಯ್ತಾ? ಡಬ್ಬಿಂಗ್, ಮಿಕ್ಸಿಂಗ್, ಮಿಮಿಕ್ರಿ ಮಾಡೋದ್ರಲ್ಲಿ ಸಿಎಂ ನಿಸ್ಸೀಮರು. ಅವರು ಸ್ವತಃ ಸಿನಿಮಾ ನಿರ್ಮಾಪಕರು. ಪದೇ ಪದೇ ಅವರು ಸ್ಪೀಕರ್ ಹೆಸರು ಹೇಳ್ತಿದ್ದಾರೆ. ಆಡಿಯೋದಲ್ಲಿ ಇದ್ದಿದ್ದು ಬರೀ ಮಿಮಿಕ್ರಿ. ದೇವೇಗೌಡರ ಕುಟುಂಬದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಎಂದು ಶ್ರೀರಾಮುಲು, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಕುಮಾರಸ್ವಾಮಿ ಜನರನ್ನು ದಿಕ್ಕು ತಪ್ಪಿಸ್ತಿದ್ದಾರೆ. ಪಂಚತಾರಾ ಹೋಟೆಲನ್ನೇ ಮನೆ ಮಾಡಿಕೊಂಡಿದ್ದಾರೆ. ಇದರ ಬಿಲ್ಲನ್ನು ಲೋಕೋಪಯೋಗಿ ಗುತ್ತಿಗೆದಾರರು ಕಟ್ಟುತ್ತಿದ್ದಾರೆ. ಇಂಥವರಿಂದ ಬಡವರು ಹಾಗೂ ಸಾಮಾನ್ಯರ ಅಭಿವೃದ್ಧಿ ಸಾಧ್ಯವಿಲ್ಲ. ನಾನು ಕ್ಲರ್ಕ್ ಅಂತಾ ಹೇಳ್ತಾರೆ. 35 ಸೀಟು ಗೆದ್ದು ಕ್ಲರ್ಕ್ ಆಗಿಯೇ ಇರಬೇಕು, ಡಿಸಿ ಆಗೋಕೆ ಆಗಲ್ಲ. ಮೊನ್ನೆ ಮಂಡಿಸಿದ ಬಜೆಟ್ ಕೇವಲ ಐದಾರು ಜಿಲ್ಲೆಗೆ ಮೀಸಲಾಗಿದೆ ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಪತಿ ಲಡ್ಡು ಪ್ರಕರಣ: 15 ತಿಂಗಳ ತನಿಖೆ ಬಳಿಕ ಕೊನೆಗೂ ಜಾರ್ಜ್‌ಶೀಟ್ ಸಲ್ಲಿಕೆ, ಇವರೇ ಪ್ರಮುಖ ಆರೋಪಿಗಳು

ಎಂಬಿಬಿಎಸ್ ಸೀಟಿಗಾಗಿ ತನ್ನ ಕಾಲನ್ನು ತಾನೇ ಕಟ್ ಮಾಡಿಕೊಂಡ ವ್ಯಕ್ತಿ

ದುನಿಯಾ ವಿಜಯ್ ಲ್ಯಾಂಡ್‌ ಲಾರ್ಡ್ ಸಿನಿಮಾ ನೋಡುತ್ತೇನೆಂದ ಸಿಎಂ ಸಿದ್ದರಾಮಯ್ಯ

ನಾನು ಕಾಂಗ್ರೆಸ್ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ: ಶಶಿ ತರೂರ್‌ ಸ್ಪಷ್ಟನೆ

ನಂದಿನಿ ಹಾಲು, ಮೊಸರು ಇದೀಗ ₹10ಕ್ಕೂ ಲಭ್ಯ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments