Select Your Language

Notifications

webdunia
webdunia
webdunia
webdunia

‘ಯತ್ನಾಳ್​ ವಶಕ್ಕೆ ಪಡೆದು ವಿಚಾರಣೆ ನಡೆಸಿ’

‘ಯತ್ನಾಳ್​ ವಶಕ್ಕೆ ಪಡೆದು ವಿಚಾರಣೆ ನಡೆಸಿ’
bangalore , ಶನಿವಾರ, 7 ಮೇ 2022 (19:35 IST)
ಮುಖ್ಯಮಂತ್ರಿ ಆಗಲು 2500 ಕೋಟಿ ಬೇಡಿಕೆ ಇಟ್ಟಿದ್ರು ಎಂಬ ಯತ್ನಾಳ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಶಾಸಕ ಯತ್ನಾಳರನ್ನ ಕೂಡಲೇ ವಶಕ್ಕೆ ಪಡೆಯಬೇಕು. ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಎಂದ್ರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿಕೆಶಿ ಇಡೀ ಭಾರತ ದೇಶವೇ ತಲ್ಲಣವಾಗುವ ಸುದ್ದಿ ನೀವು ಕೊಟ್ಟಿದ್ದೀರಿ. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ಈ ಬಿಜೆಪಿ ಸರ್ಕಾರ ಹುಟ್ಟಿದ್ದೇ ಶಾಸಕರ ಖರೀದಿ ಮಾಡೋಕೆ. ಬೇರೆ ಬೇರೆ ಶಾಸಕರಿಗೂ ಬಿಜೆಪಿ ಆಮಿಷ ಒಡ್ಡಿದ್ದನ್ನ ನಾವು ನೋಡಿದ್ದೇವೆ. 2500 ಕೋಟಿ ನಿಮ್ಮ ಸ್ಥಾನಕ್ಕೆ ತಗೊಂಡು ಬನ್ನಿ ಅಂತ ಸಿಎಂನೇ ಕರೆದ್ರು. ಆದ್ರೆ ಇನ್ನು ಯಾಕೆ ತನಿಖಾಧಿಕಾರಿ ಸುಮ್ಮನೆ ಇದ್ದಾರೆ. ಸಿಎಂ ತಮ್ಮನ್ನೇ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೋ, ಪಾರ್ಟಿ ರಕ್ಷಣೆಗೆ ನಿಂತಿದ್ದಾರೋ ಎಂದು ಪ್ರಶ್ನಿಸಿದ್ರು. ಕೇಂದ್ರ ಸರ್ಕಾರದ ಏಜೆನ್ಸಿಯವರು ತನಿಖೆ ಮಾಡಬೇಕು ಎಂದು ಡಿಕೆಶಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್‌ಐ ನೇಮಕಾತಿ ಹಗರಣ-ಕಮಿಷನ್‌ ದಂಧೆ ಆರೋಪ