Select Your Language

Notifications

webdunia
webdunia
webdunia
webdunia

ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ -ಯತ್ನಾಳ್ ಆರೋಪ

ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ -ಯತ್ನಾಳ್ ಆರೋಪ
gadaga , ಬುಧವಾರ, 7 ಜುಲೈ 2021 (16:29 IST)
ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ ಎಂಬ ಯತ್ನಾಳ್ ಆರೋಪಕ್ಕೆ ಗದಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ ಸಿಡಿಮಿಡಿ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬೇಕೆಂದು ಹುಟ್ಟಿದ ಪಕ್ಷ ಕಾಂಗ್ರೆಸ್ ವಾಗಿದೆ. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದವರು. ನಮಗೆ ಧ್ವನಿ ಎತ್ತುವಿದು ಗೊತ್ತಿಲ್ಲವೆ.
ನಾನು ಭಾರತೀಯ ಅಂತಾ ಹೆಮ್ಮೆಯಿಂದ ಹೇಳುವಂತೆ ಮಾಡಿದ ಪಕ್ಷ ನಮ್ಮದು. 60 ವರ್ಷದಲ್ಲಿ ನಿರ್ಮಾಣ ಮಾಡಿದ ಶಕ್ತಿಶಾಲಿ ರಾಷ್ಟ್ರವನ್ನ ಬಿಜೆಪಿ 6-7ವರ್ಷದಲ್ಲಿ ನಾಶ ಮಾಡಿದರು. ಜನರ ಬಗ್ಗೆ ನಿರ್ಲಕ್ಷ್ಯ ತೋರುವ ಸರ್ಕಾರವನ್ನ ಹಿಂದೆಂದೂ ನೋಡಿದ್ದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಪಕ್ಷದಲ್ಲಿನ ಮುಂದಿನ ಮುಖ್ಯಮಂತ್ರಿ ಚರ್ಚೆ ವಿಚಾರಕ್ಕೆ ಮಾತನಾಡಿದ ಎಸ್ ಆರ್ ಪಾಟೀಲರು ದಲಿತರು, ಹಿಂದುಳಿದವರು, ಲಿಂಗಾಯತರೂ ಮುಂದಿನ ಮುಖ್ಯಂಮತ್ರಿಗಳಾಗ್ಲಿ ಅನ್ನೋದು ಸಹಜ ಮಾತವಾಗಿದೆ. ಆದ್ರೆ ಮುಖ್ಯಮಂತ್ರಿ ವಿಚಾರ ಹಾದಿ ಬೀದಿಯಲ್ಲಿ ನಿರ್ಣಯ ಆಗುವುದಲ್ಲ.
ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆ ಎದುರಿಸಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದೆ.ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮಿತಿಮೀರಿ ನಡೆದಿದೆ. ಕರ್ನಾಕಟದಲ್ಲಿ ಸಂವಿಧಾನದ ಆಸೆಗಳಿಗೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದೆ.ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ವರದಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಅವರು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿ ಮದುವೆಯಾಗಿ, ಕೈಕೊಟ್ಟ ಪತಿ