ನಾನು ಆಸ್ತಿಕ, ತಂದೆಯವರು ನಾಸ್ತಿಕ, ಹಿಂದೂ ಧರ್ಮದಲ್ಲಿರುವ ನಾಸ್ತಿಕರು ಟೀಕೆ ಮಾಡ್ತಾರೆ: ಯತೀಂದ್ರ ಸಿದ್ದರಾಮಯ್ಯ

Krishnaveni K
ಶುಕ್ರವಾರ, 31 ಜನವರಿ 2025 (11:11 IST)
ಬೆಂಗಳೂರು: ಹಿಂದೂ ಧರ್ಮದಲ್ಲಿ ಇರುವವರೆಲ್ಲರೂ ಆಸ್ತಿಕರಲ್ಲ. ಹಿಂದೂ ಧರ್ಮದಲ್ಲಿ ನಾಸ್ತಿಕರೂ ಇದ್ದಾರೆ. ನಾನು ಆಸ್ತಿಕ, ನಮ್ಮ ತಂದೆಯವರು ನಾಸ್ತಿಕ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡುವುದರಿಂದ ಬಡತನ ನೀಗಲ್ಲ, ಪಾಪ ಕಳೆಯಲ್ಲ ಎಂದು ಟೀಕೆ ಮಾಡಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವುದನ್ನು ಟೀಕಿಸುವವರು ಅಯೋಗ್ಯರು ಎಂದಿದ್ದರು.

ಇದಕ್ಕೆ ಈಗ ಸಿಎಂ ಪುತ್ರ ಯತೀಂದ್ರ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಹಿಂದೂ ಧರ್ಮದಲ್ಲಿ ಹಲವು ಆಚರಣೆಗಳಿವೆ. ಎಲ್ಲರಿಗೂ ಅವರವರ ನಂಬಿಕೆ ಪ್ರಕಾರ ಬದುಕುವ ಸ್ವಾತಂತ್ರ್ಯವಿದೆ. ಕುಂಭಮೇಳದ ವಿರುದ್ಧ ಮಾತನಾಡುವವರು ಅಯೋಗ್ಯರು ಎನ್ನುವವರೇ ಅಯೋಗ್ಯರು. ಹಿಂದೂ ಧರ್ಮದಲ್ಲಿ ನಾಸ್ತಿಕರೂ ಇದ್ದಾರೆ. ನಾನು ಆಸ್ತಿಕ, ಆದರೆ ನಮ್ಮ ತಂದೆಯವರು ನಾಸ್ತಿಕ. ಹಿಂದೂ ಧರ್ಮದಲ್ಲಿ ನಾಸ್ತಿಕರು ಆಚರಣೆಗಳ ಬಗ್ಗೆ ಟೀಕೆ ಮಾಡುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ ಇದರಲ್ಲಿ ತಪ್ಪೇನು ಎಂದು ಯತೀಂದ್ರ ಪ್ರಶ್ನಿಸಿದ್ದಾರೆ.

ಯಾರಿಗೆ ನಂಬಿಕೆ ಇರುತ್ತದೋ ಅವರು ಹೋಗಿ ಸ್ನಾನ ಮಾಡಿ ಬರುತ್ತಾರೆ. ನಂಬಿಕೆ ಇಲ್ಲದವರು ಸ್ನಾನ ಮಾಡಲ್ಲ ಎಂದ ಮಾತ್ರಕ್ಕೆ ಅವರಿಗೆ ಧರ್ಮದ ಮೇಲೆ ನಂಬಿಕೆಯಿಲ್ಲ ಎಂದರ್ಥವಲ್ಲ ಎಂದು ಯತೀಂದ್ರ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

Karnataka Weather: ಇಂದು ಮಳೆ ಕಡಿಮೆ, ಆದರೆ ಹವಾಮಾನ ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments