Select Your Language

Notifications

webdunia
webdunia
webdunia
webdunia

ಸತತ 5 ಗಂಟೆ ಯಡಿಯೂರಪ್ಪ ಪಿಎ ಸಂತೋಷ್ ವಿಚಾರಣೆ

ಸತತ 5 ಗಂಟೆ ಯಡಿಯೂರಪ್ಪ ಪಿಎ ಸಂತೋಷ್ ವಿಚಾರಣೆ
ಬೆಂಗಳೂರು , ಸೋಮವಾರ, 14 ಆಗಸ್ಟ್ 2017 (18:30 IST)
ಈಶ್ವರಪ್ಪ ಪಿಎ ವಿನಯ್ ಮೇಲಿನ ಹಲ್ಲೆ ಮತ್ತು ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಹ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಸಂತೋಷ್ ಅವರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸತತ 5 ಗಂಟೆಗಳ ಕಾಲ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಮೊಬೈಲ್ ಸಂದೇಶಗಳು, ವ್ಯಕ್ತಿಗಳ ಪರಿಚಯದ ಬಗ್ಗೆ ಪೊಲೀಸರು ಸಂತೋಷ್ ಮುಂದೆ ಸಾಲು ಸಾಲು ಪ್ರಶ್ನೆಗಳನ್ನ ಇಟ್ಟಿದ್ದಾರೆ. ಇದೇವೇಳೆ, ನಗರದ ಪ್ರತಿಷ್ಠಿತ ಹೋಟೆಲ್`ನಲ್ಲಿ ರೂಮ್ ಬುಕ್ ಮಾಡಿದ್ದು ಯಾರಿಗಾಗಿ ಎಂಬ ಬಗ್ಗೆ ಪೊಲಿಸರು ಪ್ರಶ್ನಿಸಿದ್ದಾರೆ. ಪತ್ರಕರ್ತರಿಗೋಸ್ಕರ ರೂಮ್ ಬುಕ್ ಮಾಡಿದ್ದಾಗಿ ಸಂತೋಷ್ ಹೇಳಿರುವುದಾಗಿ ವರದಿಯಾಗಿದೆ.  ಹಾಗಾದರೆ ಆ ಪತ್ರಕರ್ತ ಯಾರು ಎಂಬ ಪ್ರಶ್ನೆ ಎದ್ದಿದೆ.

ನಿನ್ನೆ ಭಾನುವಾರವೂ ಬಿಡದೆ 7 ಗಂಟೆ ವಿಚಾರಣೆಗೊಳಪಡಿಸಿದ್ದ ತನಿಖಾಧಿಕಾರಿಗಳು ಇವತ್ತೂ 5 ಗಂಟೆ ತನಿಖೆ ನಡೆಸಿದ್ದಾರೆ. ನಾಳೆ ಮಧ್ಯಾಹ್ನವೂ ವಿಚಾರಣೆಗೆ ಹಾಜರಾಗುವಂತೆ ಸೂಚಸಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ದಿನೋತ್ಸವದಂದು ವಿಮಾನ ಅಪಹರಣಕ್ಕೆ ಉಗ್ರರ ಸಂಚು