Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯ ದಿನೋತ್ಸವದಂದು ವಿಮಾನ ಅಪಹರಣಕ್ಕೆ ಉಗ್ರರ ಸಂಚು

ಸ್ವಾತಂತ್ರ್ಯ ದಿನೋತ್ಸವದಂದು ವಿಮಾನ ಅಪಹರಣಕ್ಕೆ ಉಗ್ರರ ಸಂಚು
ನವದೆಹಲಿ , ಸೋಮವಾರ, 14 ಆಗಸ್ಟ್ 2017 (17:11 IST)
ಸ್ವಾತಂತ್ರ್ಯ ದಿನೋತ್ಸವದಲ್ಲೇ ವಿಧ್ವಸಂಕ ಕೃತ್ಯ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವ ಬಯಲಾಗಿದೆ.
 

ಪಾಕಿಸ್ತಾನದಲ್ಲಿ ಕುಳಿತಿರುವ ಮೂವರು ಭಯೋತ್ಪಾದಕರು ಭಾರತದ ವಿಮಾನ ಹೈಜಾಕ್ ಮಾಡಲು ಸಂಚು ರೂಪಿಸಿರುವ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗುಪ್ತಚರ ಸಂಸ್ಥೆಯಿಂದ ಗೃಹ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.
ವಿಮಾನ ಹೈಜಾಕ್`ಗೆ ಸಂಚು ರೂಪಿಸಿರುವ ಉಗ್ರರು ನಡೆಸಿರುವ ಸಂಚಿನ ದೂರವಾಣಿ ಆಡಿಯೋ ಸಹ ಗುಪ್ತಚರ ಸಂಸ್ಥೆಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಉಗ್ರರು ಹೊಸ ಹೊಸ ತಂತ್ರಜ್ಞಾನಗಳನ್ನ ಬಳಸಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿವೆ ಎನ್ನಲಾಗಿದೆ. ಹೀಗಾಗಿ, ಎಲ್ಲೆಡೆ ಭದ್ರತೆಯನ್ನ ತೀವ್ರಗೊಳಿಸಿರುವ ಗೃಹ ಇಲಾಖೆ ಏರ್`ಪೋರ್ಟ್`ಗಳಲ್ಲಿ ತಪಾಸಣೆ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮಪುತ್ರಾ ಅಬ್ಬರಕ್ಕೆ ಕೊಚ್ಚಿಹೋಯ್ತು ಅಸ್ಸಾಂ