Select Your Language

Notifications

webdunia
webdunia
webdunia
webdunia

ಈಶ್ವರಪ್ಪ, ಸಂತೋಷ್ ಜಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ ಯಡಿಯೂರಪ್ಪ

ಈಶ್ವರಪ್ಪ, ಸಂತೋಷ್ ಜಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ ಯಡಿಯೂರಪ್ಪ
ಬೆಂಗಳೂರು , ಗುರುವಾರ, 27 ಏಪ್ರಿಲ್ 2017 (12:25 IST)
ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಪಕ್ಷ ಬಲವರ್ಧನೆಗೆ ಕೆಲಸ ಮಾಡಲಿ, ಇಲ್ಲವೇ ರಾಯಣ್ಣ ಬ್ರಿಗೇಡ್ ನೋಡಿಕೊಳ್ಳಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಈಶ್ವರಪ್ಪ 4ನೇ ಸ್ಥಾನಕ್ಕೆ ಕುಸಿದಿದ್ರೂ ಅವರನ್ನ ಪರಿಷತ್ ವಿಪಕ್ಷ ನಾಯಕರಾಗಿ ಮಾಡಿದ್ದು ತಪ್ಪೇ..? ವಿಪಕ್ಷ ನಾಯಕರಾಗಿ ಪಕ್ಷ ಸಂಘಟನೆಗಾಗಿ ಏನು ಕೆಲಸ ಮಾಡುತ್ತಿದ್ದಾರೆ. ಸೊಗಡು ಶಿವಣ್ಣ ಸಹ ಕಳೆದ ಚುನಾವಣೆಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದರು. ಬಾಯಿಗೆ ಬಂದಂತೆ ಮಾತನ್ನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸಂಘಟನೆ ಉಳಿಸೋಣ ಬನ್ನಿ ಎಂಬ ಹೆಸರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಅತೃಪ್ತರ ಸಭೆ ಉದ್ದೇಶಿಸಿ ಸಮಾಧಾನವನ್ನ ಹೊರ ಹಾಕಿದ ಯಡಿಯೂರಪ್ಪ,ಬಿಜೆಪಿ ಸಂಘಟಾನಾ ಕಾರ್ಯದರ್ಶಿ ಸಂತೋಷ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲಿರುವವರೆಲ್ಲ ಸಂತೋಷ್ ಜಿ ಅವರ ಶಿಷ್ಯರು. ನನ್ನ ವಿರುದ್ಧ ಬಿಜೆಪಿ ಕಚೇರಿಯಲ್ಲೇ ಕುಳಿತು ತಂತ್ರ ರೂಪಿಸಲಾಗಿದ್ದು, ಶಿಷ್ಯರನ್ನ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ನೋಕಿಯಾ 3310 ಭಾರತಕ್ಕೆ ಬರುವ ಡೇಟ್ ಫಿಕ್ಸ್