Select Your Language

Notifications

webdunia
webdunia
webdunia
webdunia

ನೋಕಿಯಾ 3310 ಭಾರತಕ್ಕೆ ಬರುವ ಡೇಟ್ ಫಿಕ್ಸ್

ನೋಕಿಯಾ 3310 ಭಾರತಕ್ಕೆ ಬರುವ ಡೇಟ್ ಫಿಕ್ಸ್
ನವದೆಹಲಿ , ಗುರುವಾರ, 27 ಏಪ್ರಿಲ್ 2017 (11:57 IST)
ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಸಾಂಪ್ರದಾಯಿಕ ನೋಕಿಯಾ 3310 ಮೊಬೈಲ್ ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಸಿಗಲಿದೆ. ಆನ್ ಲೈನ್`ನ ಒನ್ ಲೈನ್ ವೆಬ್ ಸೈಟ್`ನಲ್ಲಿ ನೋಕಿಯಾ 3310 ಮೊಬೈಲ್ 3,899 ರೂ. ಬೆಲೆಗೆ ಮಾರಾಟಕ್ಕಿರುವುದಾಗಿ  ಉಲ್ಲೇಖಿಸಲಾಗಿದೆ.
 

ಮೇ 17ರಿಂದ ಬೈಲ್ ಶಿಪ್ಪಿಂಗ್ ಆರಂಭವಾಗಲಿದ್ದು, ಮೇ5ರಿಂದಲೇ ಮುಂಗಡ ಬುಕ್ಕಿಂಗ್ ಆರಂಭಿಸುವುದಾಗಿ ಹೇಳಿದೆ.ಏಪ್ರಿಲ್ 28ರಿಂದಲೇ ಆಸ್ಟ್ರೀಯಾ ಮತ್ತು ಜರ್ಮನಿಗಳಲ್ಲಿ ಸೇಲ್ ಆರಂಭವಾಗಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಆದರೆ, ನೋಕಿಯಾ ಸಂಸ್ಥೆ ಮಾತ್ರ ಅಧಿಕೃತವಾಗಿ ಹೇಳಿಲ್ಲ.  

ಫೆಬ್ರವರಿಯಲ್ಲಿ ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್ ಮೊಬೈಲ್ ಕಾಂಗ್ರೆಸ್`ನಲ್ಲಿ ನೋಕಿಯಾ 3310 ಮೊಬೈಲ್ ಅನ್ನ ಎಚ್ಎಂಡಿ ಗ್ಲೋಬಲ್ ಸಂಸ್ಥೆ ಬಿಡುಗಡೆಗೊಳಿಸಿತ್ತು.  
ಸಾಂಪ್ರದಾಯಿಕ ಸ್ನೇಕ್ ಗೇಮ್, ಒಂದು ತಿಂಗಳ ಬ್ಯಾಟರಿ ಬ್ಯಾಕ್ ಅಪ್ ಸೇರಿದಂತೆ ಹಲವು ವಿಶಿಷ್ಟ ಲಕ್ಷಣಗಳನ್ನ ಈ ಮೊಬೈಲ್ ಹೊಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಬಿಜೆಪಿ ಅತೃಪ್ತರ ಬಹಿರಂಗ ಸಭೆ