Select Your Language

Notifications

webdunia
webdunia
webdunia
webdunia

ಯಾದಗಿರಿಯಲ್ಲಿ ಪ್ರಚೋದನಾಕಾರಿ ಭಾಷಣ: ತೆಲಂಗಾಣ ಶಾಸಕನ ವಿರುದ್ಧ ದೂರು ದಾಖಲು

ಯಾದಗಿರಿಯಲ್ಲಿ ಪ್ರಚೋದನಾಕಾರಿ ಭಾಷಣ: ತೆಲಂಗಾಣ ಶಾಸಕನ ವಿರುದ್ಧ ದೂರು ದಾಖಲು
ಬೆಂಗಳೂರು , ಶುಕ್ರವಾರ, 15 ಡಿಸೆಂಬರ್ 2017 (16:56 IST)
ಯಾದಗಿರಿ: ಯಾದಗಿರಿಯಲ್ಲಿ ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್ ಪ್ರಚೋದನಾಕಾರಿ ಭಾಷಣ ಮಾಡಿರುವುದರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. 
ಶ್ರೀರಾಮ ಸೇನೆ ಮಂಗಳವಾರ ಸಂಜೆ ಆಯೋಜಿಸಿದ್ದ ಹಿಂದೂ ವಿರಾಟ್ ಸಮಾವೇಶದಲ್ಲಿ ರಾಜಾಸಿಂಗ್ ಠಾಕೂರ್, ಆಕ್ಷೇಪಾರ್ಹ ಭಾಷಣ ಮಾಡಿದ್ದ. ಹಿಂದೂ ವಿರಾಟ್ ಸಮಾವೇಶದಲ್ಲಿ ಪ್ರತಿಯೊಬ್ಬ ಹಿಂದೂ ಲಾಠಿ, ತಲವಾರ್ ಇಟ್ಟುಕೊಂಡಿರಬೇಕು ಅಂತ ಹೇಳಿಕೆ ನೀಡಿದ್ದ.‌ ಈಗ ವಿವಾದದ ಕಿಡಿ ಹೊತ್ತಿಸಿದ ಶಾಸಕರ ವಿರುದ್ಧ ಪ್ರಕರಣ ದಾಖಲಾಗಲಿದೆ.
 
ಕೋಮುದಳ್ಳುರಿಯಲ್ಲಿ ಕರಾವಳಿ ಪ್ರದೇಶ ನಲಗುತ್ತಿದ್ದರೆ ಆ ಕಿಡಿ ನಿಧಾನವಾಗಿ ಹೈದ್ರಾಬಾದ್ ಪ್ರದೇಶಕ್ಕೆ ವ್ಯಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ.  ಶ್ರೀ ರಾಮ ಸೇನೆಯಿಂದ  ಯಾದಗಿರಿಯಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್ ಪ್ರತಿಯೊಬ್ಬ ಹಿಂದುಗಳ ಮನೆಯಲ್ಲಿ ಲಾಠಿ, ತಲವಾರ್ ಇರಬೇಕು. ಅಗತ್ಯಬಿದ್ದರೆ ಹಿಂದೂ ಧರ್ಮ ವಿರೋಧಿಗಳ ತಲೆ ಕಡಿಯಬೇಕೆಂದು ಠಾಕೂರ್ ಕರೆ ನೀಡಿದ್ದರು.
 
ಧಾರ್ಮಿಕ ಭಾವನೆ ಕೆರಳಿಸಿದ ಬಿಜೆಪಿ ಶಾಸಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸಮಾವೇಶದಲ್ಲಿ ತಲ್ವಾರ್ ಪ್ರದರ್ಶನ ಮಾಡಿ ಕಾನೂನು ಉಲ್ಲಂಘಿಸಲಾಗಿತ್ತು.
 
 ಈ ಕುರಿತು ಪ್ರತಿಕ್ರಿಯಿಸಿರುವ ಈಶಾನ್ಯ ವಲಯ ಐಜಿಪಿ ರಾಜಾಸಿಂಗ್ ಠಾಕೂರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ವಿಚಾರಣೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಾನೂನು ತಜ್ಞರ ಜೊತೆ ಚರ್ಚಿಸಿದ ನಂತರ ಬಂಧಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಐಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
 
 ಸಮಾವೇಶದಲ್ಲಿ ಖಡ್ಗಗಳನ್ನು ಹಿಡಿದು ಪ್ರದರ್ಶನ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ ಪೊಲೀಸ್ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಐಜಿಪಿ ತಿಳಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕೋಮುಭಾವನೆ ಕೆರಳಿಸೋಕೆ ಮುಂದಾದ ಶಾಸಕನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ‌. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಅದಲು ಬದಲು: ಪೋಷಕರ ಪರದಾಟ