ಯಶಸ್ವಿನಿ' ಯೋಜನೆ ಮರು ಜಾರಿ ಮಾಡಲು ಸಿಎಂ ನಿರ್ಧಾರ

ಭಾನುವಾರ, 3 ಫೆಬ್ರವರಿ 2019 (19:03 IST)
ಬೆಂಗಳೂರು : ರಾಜ್ಯದಲ್ಲಿ `ಯಶಸ್ವಿನಿ' ಯೋಜನೆಯನ್ನು ಮತ್ತೆ ಜಾರಿ ಮಾಡುವ ತೀರ್ಮಾನವನ್ನು ಸಿಎಂ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಸಂಯೋಜಿತ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಜನಸಾಮಾನ್ಯರ ಬೇಡಿಕೆಯಂತೆ, 2 ನೇ ಹಂತದ ಚಿಕಿತ್ಸೆಗಾಗಿ ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಲು ನಿರ್ಧರಿಸಲಾಗಿದ್ದು, ಬಜೆಟ್ ನಲ್ಲಿ ಈ ಉದ್ದೇಶಕ್ಕೆ ಅನುದಾನ ಮೀಸಲಿಡಲಾಗುವುದು’ ಎಂದು ಹೇಳಿದ್ದಾರೆ.


‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ಕೇಂದ್ರದಿಂದ 200 ಕೋಟಿ ರೂ. ಅನುದಾನ ಮಾತ್ರ ಬರುತ್ತಿತ್ತು. ರಾಜ್ಯ ಸರ್ಕಾರ 800 ಕೋಟಿ ರೂ. ಭರಿಸುತ್ತಿದೆ. ರಾಜ್ಯ ದೊಡ್ಡ ಪ್ರಮಾಣದಲ್ಲಿ ಯೋಜನೆಯ ವೆಚ್ಚ ಭರಿಸುತ್ತಿದೆ. ಆದರೆ ಈ ಯೋಜನೆಗೆ ಕೇಂದ್ರದ ಹೆಸರಿಡಲಾಗುತ್ತಿದೆ’ ಎಂದು ಸಿಎಂ ಅಸಮಾಧಾನ ಹೊರಹಾಕಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಕಳಪೆ ಸಾಮಾಗ್ರಿ ಸರಬರಾಜು ಮಾಡಿದವನ ತರಾಟೆಗೆ ತೆಗೆದುಕೊಂಡ ಕೆ.ಆರ್ ಪೇಟೆ ಶಾಸಕ