Daily Horoscope
✕

ಯೂ-ಟರ್ನ್ ಹೊಡೆದ ಕುಸ್ತಿಪಟುವಿನ ತಂದೆ!

Webdunia
ಶನಿವಾರ, 10 ಜೂನ್ 2023 (19:42 IST)
ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರು​ದ್ಧದ ಕುಸ್ತಿ​ಪ​ಟು​ಗಳ ಲೈಂಗಿಕ ಕಿರು​ಕುಳ ಆರೋ​ಪ​ಕ್ಕೆ ಮಹ​ತ್ವದ ಟ್ವಿಸ್ಟ್‌ ಸಿಕ್ಕಿದೆ. ಬ್ರಿಜ್‌ಭೂಷಣ್‌ ವಿರುದ್ಧ ದೂರು ನೀಡಿದ್ದ ಅಪ್ರಾ​ಪ್ತೆಯ ತಂದೆ ಇದೀಗ ಯೂ-ಟರ್ನ್‌ ಹೊಡೆದಿದ್ದಾರೆ. ಬ್ರಿಜ್‌​ಭೂ​ಷಣ್‌ರಿಂದ ಯಾವುದೇ ಲೈಂಗಿಕ ಕಿರುಕುಳ ಆಗಿಲ್ಲ ಎಂದು ಹೇಳಿಕೆ ನೀಡಿ​ದ್ದಾರೆ. ಏಪ್ರಿ​ಲ್‌​ನಲ್ಲಿ ದೆಹಲಿ ಪೊಲೀ​ಸ​ರಿಗೆ ಬ್ರಿಜ್‌ ವಿರುದ್ಧ ಅಪ್ರಾಪ್ತೆ ಸೇರಿ​ದಂತೆ 7 ಮಂದಿ ದೂರು ಸಲ್ಲಿಸಿದ್ದರು. ಅಪ್ರಾಪ್ತೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಬ್ರಿಜ್‌ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಮೇ 10ಕ್ಕೆ ಮ್ಯಾಜಿ​ಸ್ಪ್ರೇಟ್‌ ಮುಂದೆ ಅಪ್ರಾ​ಪ್ತೆಯ ಹೇಳಿಕೆ ದಾಖ​ಲಿ​ಸ​ಲಾ​ಗಿ​ತ್ತು. ಬಳಿಕ ಅಪ್ರಾ​ಪ್ತೆಯ ತಂದೆ ಕೂಡಾ ಬ್ರಿಜ್‌ ವಿರುದ್ಧ ಲೈಂಗಿಕ ಕಿರು​ಕುಳ ಆರೋ​ಪ ಹೊರಿಸಿ ಹೇಳಿಕೆ ದಾಖ​ಲಿ​ಸಿ​ದ್ದರು. ಆದರೆ ಜೂನ್‌ 5ಕ್ಕೆ ಮ್ಯಾಜಿ​​ಸ್ಪ್ರೇಟ್‌ ಮುಂದೆ ಮತ್ತೊಮ್ಮೆ ಹಾಜ​ರಾಗಿ ಹೇಳಿಕೆ ಬದ​ಲಿ​ಸಿ​ರುವ ಅಪ್ರಾ​ಪ್ತೆಯ ತಂದೆ, ಸಿಟ್ಟಿನಿಂದ ಸುಳ್ಳು ಹೇಳಿಕೆ ನೀಡಿ​ದ್ದೆ ಎಂದು ಒಪ್ಪಿ​ಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ಸಿಎಂ ಮಾತು: ಅಶ್ವಥ್ ನಾರಾಯಣ

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೋಬೆಲ್ ಶಾಂತಿ ಪ್ರಶಸ್ತಿ

ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ: ಬಿ.ವೈ.ವಿಜಯೇಂದ್ರ

ಸಿಇಸಿ ವಿರುದ್ಧ ಪ್ರತಿಭಟನೆಗೆ ಯತ್ನ: ಕಾಕ್ರೋಚ್ ಜನತಾ ಪಾರ್ಟಿಗೆ ಪೊಲೀಸರಿಂದ ಬಿಗ್ ಶಾಕ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ