ವಿಭಿನ್ನ ರೀತಿಯಲ್ಲಿ ವಿಶ್ವ ಪರಿಸರ ದಿನಚಾರಣೆಯ ಆಚರಣೆ
Publish Date: Sun, 05 Jun 2022 (19:01 IST)
Updated Date: Sun, 05 Jun 2022 (19:26 IST)
ವಿಶ್ವಪರಿಸರ ದಿನಾಚರಣೆಯನ್ನು ಬೆಂಗಳೂರಿನಲ್ಲಿ ವಿಮೊ ಪೌಂಡೇಶನ್ ವಿವಿಧ ರೀತಿಯಲ್ಲಿ ಆಚರಿಸಲಾಯಿತು. ನಗರದ ಅಂತರಾಷ್ಟ್ರೀಯದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಆಯೋಜಿಸಿದೆ.ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯುವ ಪ್ರತಿಭೆಗಳಿಗೆ ಮತ್ತು ಪರಿಸರ ಜಾಗೃತಿ ಮೂಡಿಸುವ ನೃತ್ಯ ಮತ್ತು ಪರಿಸರ ಜಾಗೃತಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಂತರ ಮಾತನಾಡಿದ ವಿಮೋ ಪೌಂಡಶ್ನ ಮುಖ್ಯಸ್ಥ ವಿನಯ್ ಶಿಂಧೆ ನಾವು ಪ್ರತಿ ವರ್ಷ ವಿಶ್ವಪರಿಸರ ದಿನಾಚರಣೆ ಮಾಡ್ತಾಯಿದಿವಿ, ಅದೇ ರೀತಿ ಈ ವರ್ಷವೂ ಆಚರಿಸಲಾಗುತ್ತದೆ . ಇದರ ಪ್ರಮುಖ ಉದ್ದೇಶ ಈಗಿನ ಯುವ ಸಮುದಾಯಕ್ಕೆ ಪರಿಸರ ಸಂರಕ್ಷಣೆಗಾಗಿ ಅರಿವು ಮೂಡಿಸುವುದು. ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದವರಿಗೆ ಪ್ರೋತ್ಸಾಯಿಸುದು. ಈ ಕಾರ್ಯಕ್ರಮದ ಉದ್ದೇಶವಾಗಿದೆ.ಹಾಗಾಗಿ ಇವತ್ತು 5 ಜನ ತೆರೆಮರೆಯ ಸಾಧಕರನ್ನು ಗೌರವಿಸಿದ್ದೇವೆ. ಎಂದು ತಿಳಿಸಲಾಗಿದೆ.
ಮುಂದಿನ ಸುದ್ದಿ