Publish Date: Tue, 09 Jul 2019 (18:27 IST)
Updated Date: Tue, 09 Jul 2019 (18:29 IST)
ಇಂದು ವಿಶ್ವಾದ್ಯಂತ ಕ್ರಿಕೆಟ್ ಜ್ವರ ಹಬ್ಬಿಸಿರುವ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಬರುವಂತೆ ಟೀಂ ಇಂಡಿಯಾಕ್ಕೆ ಶುಭಾಷಯಗಳ ಮಹಾಪೂರ ಹರಿದುಬರುತ್ತಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟೀಂ ಇಂಡಿಯಾಗೆ ನಾಲ್ಕನೇ ಬಾರಿ ಫೈನಲ್ ಗೇರುವ ಹಂಬಲದಲ್ಲಿದೆ. ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿರುವ ಎರಡು ತಂಡಗಳ ನಡುವಿನ ಕದನಕ್ಕೆ ಓಲ್ಡ್ ಟ್ರಾಫರ್ಡ್ ಮೈದಾನ ಸಜ್ಜಾಗಿದೆ.
ಟೀಂ ಇಂಡಿಯಾ ಗೆದ್ದುಬರಲಿ ಎಂದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಹಾರೈಸಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಜೂನಿಯರ್ ಕ್ರಿಕೆಟರ್ಸ್ ಭಾರತ ಈ ಬಾರಿಯ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪುವುದರಲ್ಲಿ ಅನುಮಾನವೇ ಇಲ್ಲ.
ಹಾಗೇ ಈ ಬಾರಿ ಕಪ್ ನಮ್ಮದೇ ಎಂದು ವಿಶ್ವಾಸ ಹೊರಹಾಕಿದ್ದಾರೆ. ಇನ್ನು ಭಾರತದ ಪಟ ಇಟ್ಟುಕೊಂಡು ಭಾರತ ಮಾತ ಕೀ ಜೈ ಎಂದು ಘೋಷಣೆ ಕೂಗಿ ಟೀ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.