ಜನವರಿ ಫೆಬ್ರವರಿ ಬಂತು ಅಂಥ ಹೇಳಿದ್ರೆ ಸಾಕು ಶಾಲೆಗಳಲ್ಲಿ ಎಲ್ಲಿಲ್ಲದ ಸಂಬ್ರಮ, ಯಾವ ಶಾಲೆಗೆ ಹೋದ್ರು ಆನಿಯಲ್ ಡೆ,ಸೆಂಟ್ ಆಫ್ , ಎತ್ನಿಕ್ ಡೇ ಹೀಗೆ ಅನೇಕ ಕಾರ್ಯಕ್ರಮಗಳನ್ನ ಮಾಡುವ ಜೊತೆಗೆ ಮಕ್ಕಳನ್ನ ಪೋಷಕರನ್ನ ರಂಜಿಸುವ ಕೆಲಸ ಶಾಲೆಗಳು ಮಾಡ್ತಾನೆ ಬಂದಿವೆ.
ತಲೆಗೆ ಪೀಕ್ ಕಲ್ಲರ್ ಟೇಪ್ ಕಟ್ಟಿ ರಸ್ತೆಯಲ್ಲಿ ನಾಟಕ ಮಾಡ್ತಾಯಿರೋ ಮಕ್ಕಳು..ಒಂದು ಕಡೆ ಮಕ್ಕಳ ನಾಟಕವನ್ನ ನೋಡ್ತಾ ಇರೋ ಜನರು ಮತ್ತು ಪೋಷಕರು, ಅರ್ರೆ ಯಾಕೆ ಮಕ್ಕಳು ರಸ್ತೆಯಲ್ಲಿ ನಾಟಕ ಮಾಡ್ತಾ ಇದ್ದಾರೆ. ಮಕ್ಕಳು ಮಡ್ತಾಯಿರೋ ನಾಟಕವಾದ್ರು ಯಾವ್ದು ಅಂಥ ನೀವೆಲ್ರು ಯೋಚನೆ ಮಾಡ್ತಾಯಿರಬಹುದು.ಹೌದು ವೆಂಕಟೇಶ್ ಪುರಂ ನಲ್ಲಿರುವ ನ್ಯೂ ಹಾರಿಜನ್ ಇಂಗ್ಲೀಷ್ ಹೈ ಸ್ಕೂಲ್ ನಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಮಾಡ್ತಿದ್ದು, ಕ್ಯಾನ್ಸರ್ ಗೆ ಜಾಗೃತಿ ಮೂಡಿಸುವ ನಾಟಕಗಳನ್ನ ಮಕ್ಕಳು ಪ್ರದರ್ಶಿಸಿದ್ದಾರೆ. ಶಾಲೆ ಅಂತ ಹೇಳಿದಮೇಲೆ ಆಟ ಪಾಠ ಓದು ಬರಹ ಎಲ್ಲವೂ ಇದ್ದದ್ದೇ, ಆದರೇ ಒಂದು ಶಾಲೆ ಮಾದರಿ ಶಾಲೆ ಅಂದೆನಿಸಿಕೊಳ್ಳ ಬೇಕೆಂದರೆ ಅಂತಹ ಶಾಲೆಯಲ್ಲಿ ನಿಜವಾಗಿಯೂ ಮಕ್ಕಳಿಗೆ ಜೀವನದ ಬಗ್ಗೆ ಹಾಗೆ ಜೀವನ ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿಗನ್ನ ಮೂಡಿಸಿದಾಗ ಮಾತ್ರ ಆ ಶಾಲೆ ಮಾದರಿಯ ಶಾಲೆ ಅಂಥ ಕರೆಸಿಕೊಳ್ಳುತ್ತೆ .
ಶಾಲೆ ಮಕ್ಕಳ ಕಲಿಕೆಯ ಮೊದಲ ಹೆಜ್ಜೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಮಾತಿನಂತೆ ಶಾಲಾ ದಿನಗಳಿಂದ ಕಲಿಯದ ಶಿಕ್ಷಣ ಎಲ್ಲಿಯೂ ಸಲ್ಲದು,ಈ ಮುನ್ನುಡಿ ಯಾಕೆ ಅಥಾ ಯೊಚಿಸ್ತಾ ಇರಬಹುದು ಹೌದು ವೆಂಕಟೇಶಪುರಂ ಫಸ್ಟ್ ಕ್ರಾಸ್ ಟಿ ಕಾಲೋನಿಯಲ್ಲಿರುವ ನ್ಯೂ ಹಾರಿಜನ್ ಇಂಗ್ಲೀಷ್ ಹೈ ಸ್ಕೂಲ್ ನಲ್ಲಿ ಮೊದಲಿನಿಂದ ಲ್ಲಿಯವರೆಗೂ ಅನೇಕ ಜಾಗೃತಿ ಕಾರ್ಯಕ್ರಮವನ್ನ ಶಾಲೆ ನಡೆಸುತ್ತಾ ಬಂದಿದೆ.ಬರೀ ಶಿಕ್ಷಣ ಮಾತ್ರವಲ್ಲದೇ ಇದರಿಂದಾಚೆಗೆ ಇನ್ನು ಏನೋ ಸನ್ಮಾರ್ಗವನ್ನ ಕಲ್ಪಿಸುವಂತಹ ಅಡಿಪಾಯವನ್ನಾ ಹಾಕ್ತಿದೆ ಇಲ್ಲೊಂದು ವಿದ್ಯಾ ಕೇಂದ್ರ.... ಅದೇ ಪ್ರಸಿದ್ಧ ನ್ಯೂ ಹಾರಿಜೆನ್ ಇಂಗ್ಲೀಷ್ ಹೈ ಸ್ಕೂಲ್. ನ್ಯೂ ಹಾರಿಜನ್ ಇಂಗ್ಲೀಷ್ ಹೈ ಸ್ಕೂಲ್.. ಇವತ್ತು ಹಲವು ವಿಶೇಷತೆಗಳಿಂದ, ವಿಭಿನ್ನವಾಗಿ ಸದ್ದು ಮಾಡ್ತಾ ಇದೆ.. ಹಾಗೆನೇ ಅಷ್ಟೇ ವೇಗವಾಗಿ ಜನಪ್ರಿಯತೆಯನ್ನ ಗಳಿಸಿಕೊಂಡು ಕರ್ನಾಟಕದ ಹಲವು ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದೆ ನಮ್ಮಲ್ಲರ ಹೆಮ್ಮೆಯ ನ್ಯೂ ಹಾರಿಜೆನ್ ಇಂಗ್ಲೀಷ್ ಹೈ ಸ್ಕೂಲ್.. ಇವತ್ತು ಏನಿಲ್ಲ ಅಂದ್ರೂ, ಸಾಕಷ್ಟು ವಿದ್ಯಾರ್ಥಿಗಳು ಹರಸಿ ಹರಸಿ, ಇದೇ ವಿದ್ಯಾಕೇಂದ್ರದಲ್ಲಿ ಶಿಕ್ಷಣವನ್ನ ಪಡೆಯೋದಕ್ಕೆ ಹಂಬಲಿಸುತ್ತಾ ತುದಿಗಾಲಲ್ಲಿ ನಿಲ್ತಾರೆ... ಇಲ್ಲಿ ಬರೀ ಶಿಕ್ಷಣ ಮಾತ್ರವೇ ಮೂಲ ಉದ್ದೇಶವಾಗಿಲ್ಲ, ಇದಕ್ಕೂ ಮೀರಿದ ಪಠ್ಯೇತರ ಕಲಿಕೆಯೂ ಇಲ್ಲಿ ಸಿಕ್ತಾಯಿದೆ.
ಇಷ್ಟೇ ಅಲ್ಲ ನ್ಯೂ ಹಾರಿಜೆನ್ ಇಂಗ್ಲೀಷ್ ಹೈ ಸ್ಕೂಲ್ ನ ಮಕ್ಕಳು ಕೆ ಜಿ ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಜಾಗೃತಿಯನ್ನ ಮೂಡಿಸಿದ್ದಾರೆ .ಆರೋಗ್ಯ ಕೇಂದ್ರದ ಬಳಿ ಕ್ಯಾನ್ಸರ್ ಹರಡುವ ಬಗ್ಗೆ ಕ್ಯಾನ್ಸರ್ ನಿಂದಾಗುವ ಪರಿಣಾಮಗಳ ಬಗ್ಗೆ ನಾಟಕ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನ ಮೂಡಿಸಲಾಯಿತು.