Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಬಡತನ ಇಳಿಕೆ ಎಂದ ವಿಶ್ವಬ್ಯಾಂಕ್

ಭಾರತದಲ್ಲಿ ಬಡತನ ಇಳಿಕೆ ಎಂದ ವಿಶ್ವಬ್ಯಾಂಕ್
bangalore , ಸೋಮವಾರ, 18 ಏಪ್ರಿಲ್ 2022 (18:10 IST)
ಭಾರತದಲ್ಲಿ ಕಡುಬಡತನ ಸರಾಸರಿ ಶೇ. 12.3ರಷ್ಟು ಕಡಿಮೆ ಆಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2011 ಮತ್ತು 2109ರ ಅಂಕಿಅಂಶವನ್ನು ತುಲನೆ ಮಾಡಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ನಡೆಸಿದ ಅಧ್ಯಯನ ಆಧರಿಸಿ ಈ ಅಭಿಪ್ರಾಯವನ್ನು ವಿಶ್ವಬ್ಯಾಂಕ್ ವ್ಯಕ್ತಪಡಿಸಿದೆ. 2011ರಲ್ಲಿ ಶೇ. 22.5 ಇದ್ದ ಬಡತನ ದರ, 2019ರಲ್ಲಿ ಶೇ.10.2ಕ್ಕೆ ಇಳಿಕೆ ಆಗಿದೆ ಎಂದು ವರದಿ ವಿಶ್ಲೇಷಿಸಿದೆ. ಭಾರತದಲ್ಲಿ ಕಡುಬಡತನ ಗಣನೀಯವಾಗಿ ಕುಸಿದಿದೆ. ಅಸಮಾನತೆ ಅಂತರ ತುಸು ಕಡಿಮೆ ಆಗಿದೆ. ಸರ್ಕಾರಗಳು ಕಡುಬಡವರಿಗೆ ವಿತರಿಸುತ್ತಿರುವ ಆಹಾರ ಪಡಿತರದ ಪ್ರಮಾಣ ಕಳೆದ 40 ವರ್ಷದಲ್ಲಿ ಕಡಿಮೆ ಆಗಿದೆ ಎಂದು ಐಎಂಎಫ್​ನ 'ಭಾರತದಲ್ಲಿ ಕಳೆದ ದಶಕದಲ್ಲಿ ಬಡತನ ಇಳಿಕೆ' ಎಂಬ ವರದಿ ತಿಳಿಸಿದೆ. ವಿಶ್ವಬ್ಯಾಂಕ್ ಸಂಶೋಧನಾ ನೀತಿಯ ಭಾಗವಾಗಿ ಈ ಅಧ್ಯಯನ ವರದಿಯನ್ನು ಐಎಂಎಫ್​ನ ಆರ್ಥಿಕ ತಜ್ಞರು ಸಿದ್ಧಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್‌ ಬಿಜೆಪಿಯ ‘ಬಿ’ ಟೀಂ